Posts Slider

Karnataka Voice

Latest Kannada News

ಬಾರದ ಮಾರ್ಚ ತಿಂಗಳ ಸಂಬಳ- ನೌಕರಿ ಭಯ: ಉಗರಗೋಳದಲ್ಲಿ ನೇಣಿಗೆ ಶರಣಾದ ಡ್ರೈವರ್ ಕಂ ಕಂಡಕ್ಟರ್..!

1 min read
Spread the love

ಸವದತ್ತಿ: ಕಳೆದ ಮಾರ್ಚ ತಿಂಗಳು ಸಂಬಳವೂ ಬಾರದೇ, ನೌಕರಿ ಹೋಗುವ ಭಯದಿಂದ ಸವದತ್ತಿ ಡಿಪೋದ ಚಾಲಕ ಕಂ ನಿರ್ವಾಹಕ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಗರಗೋಳ ಗ್ರಾಮದಲ್ಲಿ ನಡೆದಿದೆ.

ಮೂರು ಮಕ್ಕಳನ್ನ ಹೊಂದಿರುವ ಶಿವುಕುಮಾರ ಕ್ಷೀರಸಾಗರ ಎಂಬ 40 ವಯಸ್ಸಿನ ಚಾಲಕ ಕಂ ನಿರ್ವಾಹಕ ಎಂಬುವವರೇ ಮನೆಯಲ್ಲಿ ಎಲ್ಲರೂ ಮಲಗಿದ ನಂತರ ನೇಣು ಹಾಕಿಕೊಂಡು ಶರಣಾಗಿದ್ದಾರೆ.

ಕಳೆದ ತಿಂಗಳ ಸಂಬಳ ಬಾರದೇ ಮನೆಯಲ್ಲಿ ಸಾಕಷ್ಟು ಬೇಸರಗೊಂಡಿದ್ದರು. ಅಷ್ಟೇ ಅಲ್ಲ, ಹೋರಾಟ ಆರಂಭಗೊಂಡಿದ್ದರಿಂದ ಕೆಲವರನ್ನ ನೌಕರಿಯಿಂದ ತೆಗೆಯುತ್ತಿದ್ದಾರೆಂಬ ಮಾಹಿತಿಯನ್ನ ನೋಡಿ, ಮತ್ತಷ್ಟು ಬೇಸರಗೊಂಡಿದ್ದರು. ನಿನ್ನೆ ಇಡೀ ದಿನ ಮನೆಯಲ್ಲಿ ಇದೇ ವಿಷಯದ ಬಗ್ಗೆ ಮಾತನಾಡುತ್ತಿದ್ದರು.

ನೌಕರಿ ತಮ್ಮದು ಹೋಗಿಬಿಡಬಹುದಾ ಎಂಬ ಆತಂಕದಿಂದಲೇ ಮಲಗಿದ್ದ ಶಿವುಕುಮಾರ ಅವರು, ಮಾನಸಿಕವಾಗಿ ತೀವ್ರ ನೊಂದಿದ್ದರು. ಹೀಗಾಗಿಯೇ ಸಾವಿಗೆ ಶರಣಾಗಿದ್ದಾರೆ. ಯಾವುದೇ ಅಧಿಕಾರಿಗಳ ಕಿರುಕುಳವಿರಲಿಲ್ಲವೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *