Karnataka Voice

Latest Kannada News

ವಿಜಯ ಬಿರಾದಾರ ಇನ್ನೂ ಮುಂದೆ ಇನ್ಸಪೆಕ್ಟರ್ ಅಲ್ಲಾ…!

Spread the love

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಹಲವು ಡಿಎಸ್ಪಿಗಳಿಗೆ ಮುಂಬಡ್ತಿ ನೀಡಿದ ಬೆನ್ನಲ್ಲೇ 29 ಇನ್ಸಪೆಕ್ಟರುಗಳಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದ್ದು, ಧಾರವಾಡದ ಸಿಇಎನ್ ಠಾಣೆಯ ಇನ್ಸಪೆಕ್ಟರ್ ವಿಜಯ ಬಿರಾದಾರ ಸೇರಿದಂತೆ ಅವಳಿನಗರದಲ್ಲಿ ಕರ್ತವ್ಯ ನಿರ್ವಹಿಸಿದ ಹಲವರು ಮುಂಬಡ್ತಿ ಪಡೆದಿದ್ದಾರೆ.

ಹುಬ್ಬಳ್ಳಿ ಶಹರ ಠಾಣೆಯ ಇನ್ಸಪೆಕ್ಟರ್ ಆಗಿದ್ದ ಎಂ.ಎಸ್.ಪಾಟೀಲ, ಗಿರೀಶ ಬೋಜಣ್ಣನವರ, ಬಾಬುಸಾಹೇಬ ಹುಲ್ಲಣ್ಣನವರ ಈ ಲಿಸ್ಟನಲ್ಲಿ ಮುಂಬಡ್ತಿ ಪಡೆದಿದ್ದಾರೆ. ಈ ಮೂಲಕ ತೆರವಾದ ಇನ್ಸಪೆಕ್ಟರ್ ಸ್ಥಾನಗಳಿಗೆ ಮತ್ತೆ ಪಿಎಸ್ಐಗಳ ಪ್ರಮೋಷನ್ ಆಗುವ ಸಾಧ್ಯತೆಯಿದೆ.

ಮುಂಬಡ್ತಿ ಪಡೆದಿರುವ ಇನ್ಸಪೆಕ್ಟರುಗಳಿಗೆ ಇನ್ನೂ ಸ್ಥಳವನ್ನ ನಿಯೋಜನೆ ಮಾಡಿಲ್ಲ. ಕೆಲವರು ಮತ್ತೆ ಧಾರವಾಡದಲ್ಲಿಯೇ ಜಾಗವನ್ನ ಗಿಟ್ಟಿಸುವುದಕ್ಕೆ ಮುಂದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


Spread the love

Leave a Reply

Your email address will not be published. Required fields are marked *