ಶಿಕ್ಷಕನಿಂದ ಎಸಿಬಿ ಬಲೆಗೆ ಬಿದ್ದ ಬಿಇಓ..!

ದಾವಣಗೆರೆ: ಶಿಕ್ಷಕರಿಂದಲೇ ಲಂಚ ಕೇಳಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಭ್ರಷ್ಟಾಚಾರದ ಬಗ್ಗೆ ಸಕತ್ ಪಾಠವೊಂದನ್ನ ಶಿಕ್ಷಕರೇ ಕಲಿಸಿರುವ ಘಟನೆಯೊಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ.

ಶಿಕ್ಷಕರ ಕಾರ್ಯವನ್ನ ಮಾಡಿಕೊಡಲು 25 ಸಾವಿರ ರೂಪಾಯಿ ಲಂಚವನ್ನ ಕೇಳಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಹಾಗೂ ಇವರಿಗೆ ಸಹಕಾರ ನೀಡಿದ್ದ ಶಿಕ್ಷಣ ಸಂಯೋಜಕ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಶಿಕ್ಷಕ ಆಂಜನೇಯ ನಾಯಕ ನೀಡಿದ ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಹತ್ತು ಸಾವಿರ ಪಡೆಯುವಾಗಲೇ ಬಂಧನ ಮಾಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಈ ಮೂಲಕ ಹೊರಬಿದ್ದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸಿಬಿ ಬಲೆಗೆ ಬಿದ್ದ ಘಟನೆ ಇನ್ನೂ ಹಸಿರಿರುವಾಗಲೇ ಮತ್ತೊಂದು ಘಟನೆ ನಡೆದಿದ್ದು, ಬಿಇಓಗಳ ಭ್ರಷ್ಟಾಚಾರ ಹೊರ ಬೀಳುತ್ತಿವೆ.