Posts Slider

Karnataka Voice

Latest Kannada News

ಕುಂದಾಪುರದ ಮರಳಿಗೆ ಲೋಕಲ್ ಉಸುಕು ಮಿಕ್ಸ್…! ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಡಬಲ್ ಕ್ರಾಸ್ ದಂಧೆ…!

1 min read
Spread the love

ಹುಬ್ಬಳ್ಳಿ-ಧಾರವಾಡದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಎಲ್ಲಿದ್ದಾರೆಂದು ಯಾರೂದರೂ ಹುಡುಕಿಕೊಡಿ…

ಹುಬ್ಬಳ್ಳಿ: ವಾಣಿಜ್ಯನಗರಿಯನ್ನ ಛೋಟಾ ಬಾಂಬೆ ಎಂದು ಕರೆಯುವುದಕ್ಕೂ ಇಲ್ಲಿಯ ಡಬಲ್ ಗೇಮ್ ದಂಧೆಗಳಿಗೂ ಕಾರಣವಿದೆಯೇನೋ ಅನಿಸುತ್ತಿದೆ. ಮಧ್ಯಮವರ್ಗದವರ ಜೀವನದ ಜೊತೆ ಸದಾಕಾಲ ಚೆಲ್ಲಾಟವಾಡುವ ಅಕ್ರಮವನ್ನ ಬೇರು ಸಮೇತ ತೆಗೆದು ಹಾಕಲು ಪೊಲೀಸರಿಗೆ ಆಗದೇ ಇರುವುದು ಕೂಡಾ, ಇಲ್ಲಿನ ಪರಿಸ್ಥಿತಿಯ ವ್ಯಂಗ್ಯವೆನ್ನಬಹುದು.

ಹೌದು.. ಬೇಸಿಗೆಯ ಸಮಯದಲ್ಲಿ ಮನೆಗಳ ನಿರ್ಮಾಣ ಚೂರು ಹೆಚ್ಚಾಗಿವೆ ಇರುತ್ತವೆ. ಅದನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ಮರಳುಕೋರರು, ಮನೆಗೆಲಸಕ್ಕೆ ಬೇಡವಾದ ಮರಳನ್ನ, ಉತ್ತಮ ಮರಳಿನೊಂದಿಗೆ ಸೇರಿಸಿ ಮಾರಾಟ ಮಾಡಲಾಗುತ್ತಿದೆ.

ಪೊಲೀಸರಿಗೆ ಗೊತ್ತೆಯಿಲ್ಲದಿದ್ದರೇ ಇಲ್ಲಿದೆ ನೋಡಿ ವೀಡಿಯೋ..

ಈಗಲೂ ಗೊತ್ತೆಯಾಗದೇ ಇದ್ದರೇ ನೀವೂ ಹುಬ್ಬಳ್ಳಿಯ ಬಗ್ಗೆ ಇನ್ನೂ ಸಂಬಳಕ್ಕಾಗಿಯೇ ಕಾರ್ಯನಿರ್ವಹಿಸುತ್ತಿದ್ದೀರಿ ಎಂದರ್ಥವಲ್ಲವೇ. ಇಂತಹದ್ದು ದಿನಂಪ್ರತಿ ನಡೆಯುತ್ತಿದೆ. ಸರ್ಫರಾಜ್ ಎನ್ನುವ ದಂಧೆಕೋರ ಹಿರಿಯ ಅಧಿಕಾರಿಯೋರ್ವರ “ಆಮದನಿ” ನೋಡಿಕೊಳ್ಳುತ್ತ ಮಿಕ್ಸಿಂಗ್ ದಂಧೆಯನ್ನ ಆರಂಭಿಸಿಕೊಂಡಿದ್ದಾನೆ.

ಬಡವರ ಬಗ್ಗೆಯೂ, ಮಧ್ಯಮವರ್ಗದವರ ಬಗ್ಗೆ ಕಾಳಜಿಯೂ ಇದ್ದರೇ ಇಂತವರನ್ನ ಹೆಡಮುರಿಗೆ ಕಟ್ಟಿ, ಬಡವರ ಮನೆಗಳನ್ನ ಉಳಿಸುವುದು ಉತ್ತಮ. ಇಂತಹ ನೀಚರ ಹಣದಿಂದಲೇ ಕೆಲವು ಅಧಿಕಾರಿಗಳು ಹೆಂಡತಿ-ಮಕ್ಕಳ ಖರ್ಚನ್ನ ನೋಡಿಕೊಳ್ಳುತ್ತಿದ್ದರೇ, ಈ ಅಕ್ರಮ ದಂಧೆ ನಡೆಯಲಿ ಬಿಡಿ. ಬಡವರ ಸಾಯಲಿ, ಮಧ್ಯಮವರ್ಗದವರು ರಸ್ತಗೆ ಬರಲಿ.. ಅಲ್ಲವೇ.. ಪ್ರಜ್ಞಾವಂತರು ಹೀಗೆನ್ನುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed