Posts Slider

Karnataka Voice

Latest Kannada News

Spread the love

ಬೆಂಗಳೂರು: ಸಿಡಿ ಲೇಡಿಯ ದೂರು ದಾಖಲಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಎಸ್ಐಟಿ ಮುಂದೆ ತಮ್ಮ ವಕೀಲರೊಂದಿಗೆ ಹಾಜರಾಗಲು ಆಗಮಿಸಿದ್ದಾರೆ.

ಸಿಡಿ ಕೇಸಿನಲ್ಲಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಆಗಮಿಸಿರುವ ರಮೇಶ ಜಾರಕಿಹೊಳಿ, ಆಡುಗೋಡಿಯ ಟೆಕ್ನಿಕಲ್ ಸೆಲ್  ಮುಂದೆ ಹಾಜರಾಗಿದ್ದಾರೆ. ರಮೇಶ ಜಾರಕಿಹೊಳಿ ಜೊತೆ ಅವರ ವಕೀಲರು ಹಾಗೂ ಮಾಜಿ ಶಾಸಕ ನಾಗರಾಜ ಇದ್ದಾರೆ.

ಸಿಡಿ ಲೇಡಿಯ ವಿಷಯವಾಗಿ ತಮ್ಮ ಬಳಿಯು  ದಾಖಲೆಯಿದೆ ಎಂದು ಹೇಳಿದ್ದ ರಮೇಶ ಜಾರಕಿಹೊಳಿ, ವಿಚಾರಣೆ ವೇಳೆಯಲ್ಲಿ ದಾಖಲೆಗಳನ್ನ ನೀಡಬಹುದೆಂದು ಹೇಳಲಾಗಿದೆ. ತಮ್ಮಲ್ಲಿಯೂ 11 ದಾಖಲೆಗಳು ಇವೆ ಎಂದು ರಮೇಶ ಜಾರಕಿಹೊಳಿ ಹೇಳಿಕೊಂಡಿದ್ದರು.

ರಮೇಶ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿಯ ವಿಷಯವಾಗಿ ದಿನೇ ದಿನೇ ಹಲವು ಟ್ವಿಸ್ಟಗಳು ನಡೆಯುತ್ತಿದ್ದು, ಇಂದು ಯುವತಿ ಕೂಡಾ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆಯಿದೆ.

ಎಸ್ಐಟಿ ಮುಂದೆ ರಮೇಶ ಜಾರಕಿಹೊಳಿ ಯಾವ ಯಾವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆಂಬುದು ಕೌತುಕ ಮೂಡಿಸಿದೆ. ಹೊರಗೆ ಬಂದ ನಂತರ ರಮೇಶ ಜಾರಕಿಹೊಳಿ ಮಾತನಾಡುವ ಸಾಧ್ಯತೆಯಿದೆ.


Spread the love

Leave a Reply

Your email address will not be published. Required fields are marked *