Posts Slider

Karnataka Voice

Latest Kannada News

ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ “ಮಾದರಿ ಕಾರ್ಯಕ್ರಮ”…!

1 min read
Spread the love

ಹುಬ್ಬಳ್ಳಿ: ತಾಲೂಕಿನ ಹೆಬಸೂರ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ, ಸಾಧಕರಿಗೆ ಹಾಗೂ ದನಿಗಳಿಗೆ ಸತ್ಕಾರ ಕಾರ್ಯಕ್ರಮವನ್ನ ಹೆಣ್ಣು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲವ್ವ.ಗಿ.ಕುರ್ಡಿಕೇರಿ,  ಸದಸ್ಯರುಗಳಾದ ಪುಷ್ಪಾ ಗಿ.ತಳವಾರ, ಗಿರಿಜಾ.ಫ.ಕುರುಬರ, ಪ್ರೇಮಾ.ಬೀ.ಚವರಡ್ಡಿ, ಸಂಜೀವ.ಶಿ.ಕುರಿ, ಎಲ್ಲವ್ವ.ಹ.ಮೊರಬಣ್ಣವರ, ಶಶಿಕಲಾ.ಗೋ.ಗಡ್ಡಿ, ಶಿವಾನಂದ ಮ.ಲದ್ದಿ, ಸುರೇಶ.ಅ.ಹಡಪದ, ಪ್ರವೀಣ.ರಾ.ಹಲಗತ್ತಿ, ರತ್ನವ್ವ.ಪಿ.ಚನ್ನದಾಸರ, ನಾಗರತ್ನಾ.ಸಿ.ಪಾರ್ದಿ ಹರಣಶಿಕಾರಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಎಮ್.ಸಿ.ಕೊಂಡಗೋಳಿ,  ಸಹಿಪ್ರಾಕ ಹೆ./ ಕ ಗಂ ಶಾಲೆ ಪ್ರಧಾನ ಗುರುಮಾತೆ  ಎಸ್.ಎಲ್.ಬೆಟಗೇರಿ, ವಿದ್ಯಾ.ಲಕ್ಷ್ಮೇಶ್ವರ, ದಾನಿಗಳಾದ ಚಂದ್ರು ಹರಣಶಿಕಾರಿ, ನಿಂಗಪ್ಪ ಕುರುಬರ, ಅಡುಗೆ ಸಿಬ್ಬಂದಿಯವರಾದ ಕಸ್ತೂರಿ ಅರ್ಕಸಾಲಿ, ನಿರ್ಮಲಾ ತೆಗ್ಗಿನಕೇರಿ, ಲಕ್ಷ್ಮಿ ಜುಂಜಪ್ಪನವರ ಅವರುಗಳಿಗೆ  ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಶಾಲಾ ಸಿಬ್ಭಂದಿಯವರೊಡಗೂಡಿ ಸತ್ಕರಿಸಿಲಾಯಿತು.

ಇದೇ ಸಂದರ್ಭದಲ್ಲಿ ಯುಕೋ ಕ್ಲಬ್ ಹಸಿರು ಪಡೆ ಅಡಿಯಲ್ಲಿ ನಡೆದ ಭಾಷಣ, ಪ್ರಬಂಧ, ಚರ್ಚಾಕೂಟ, ಚಿತ್ರ ಕಲೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮೂಲಭೂತ ಸೌಕರ್ಯ ಕಲಿಕಾ, ಕ್ರೀಡಾ ಸಾಮಗ್ರಿ ಸ್ಮಾರ್ಟ ಶಾಲೆ ಕುರಿತು ಮನವಿ ಅರ್ಪಿಸಲಾಯಿತು

ಗ್ರಾಮೀಣ ಪ್ರತಿಭೆಗಳು ಕಮರಿ ಹೋಗದಂತೆ ಸಮುದಾಯ  ಪ್ರೋತ್ಸಾಹಿಸಿ ಪುರಸ್ಕರಿಸಿದಾಗ ಪ್ರತಿಭೆಗಳು ಮೇರು ಪಂಕ್ತಿಯಲ್ಲಿ ಅರಳುತ್ತವೆ ಎಂದು ಅತಿಥಿಗಳು ಹೇಳಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ  ಪುರದಪ್ಪ ಗಾಳಿ, ಸದಸ್ಯರುಗಳಾದ ವೆಂಕಣ್ಣ ತಳವಾರ, ಲಾಡಸಾಬ ಪೀರಖಾನವರ, ರಾಜೇಸಾಬ ನಾಯ್ಕರ, ಹಜರತ್ ಬಿ ಪೀರಖಾನವರ, ಎಚ್.ಕೆ.ಮುದರಡ್ಡಿ, ಎಚ್.ಎಫ್.ಬಲ್ಲರವಾಡ, ಮಂಜುನಾಥ ಹಡಪದ, ಕಾವೇರಿ ಅಕ್ಕಿ, ಸುಮಿತ್ರಾ ಕುರ್ಡಿಕೇರಿ, ವಿ.ವಿ.ಈಟಿ, ಎಸ್.ಎಸ್.ಸೋನಗಜ, ಆರ್.ವಾಯ್.ಬಾರ್ಕೇರ, ಪ್ರ.ಗು.ರವಿ ತೆಗ್ಗಿನಕೇರಿ, ಶಾಲಾ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಲತಾ  ಗ್ರಾಮಪುರೋಹಿತ ಪ್ರಾರ್ಥಿಸಿದರು. ಅಶೋಕ.ಎಂ.ಸಜ್ಜನ.ಸ್ವಾಗತಿಸಿದರು. ದೇವೇಂದ್ರ ಪತ್ತಾರ ನಿರೂಪಿಸಿ ವಂದಿಸಿದರು.


Spread the love

Leave a Reply

Your email address will not be published. Required fields are marked *