“ಯುವರತ್ನ”ನಿಗೆ ಉಣಕಲ್ಲನ ಕಿರಣಕುಮಾರ ಬೆಟಗೇರಿ ಸಾಥ್…!

ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ ರಾಜಕುಮಾರ ಅಭಿನಯದ ಯುವರತ್ನ ಸಿನೇಮಾದಲ್ಲಿ ನಮ್ಮ ಹುಬ್ಬಳ್ಳಿಯ ಉಣಕಲ್ ಗ್ರಾಮದ ಯುವಕನೋರ್ವ ಮುಂಚೂಣಿಯ ಕಾರ್ಯವನ್ನ ಮಾಡಿ, ಇಡೀ ಚಿತ್ರತಂಡದ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು.. ಪುನೀತ ರಾಜಕುಮಾರ ಅಭಿನಯದ ಯುವರತ್ನ ಸಿನೇಮಾದ ಶೂಟಿಂಗ್ ಸಮಯದ ಮೂರು ಶೆಡ್ಯೂಲಿನಲ್ಲೂ ಸುಮರು 380 ಕಲಾವಿದರನ್ನ ಪೂರೈಕೆ ಮಾಡುವ ಮೂಲಕ ಹೊಸದೊಂದು ದಾರಿಗೆ ಉಣಕಲ್ ಗ್ರಾಮದ ಕಿರಣಕುಮಾರ ಬೆಟಗೇರಿ ನಾಂದಿ ಹಾಡಿದ್ದಾರೆ.
ಉತ್ತರ ಕರ್ನಾಟಕದ ಿತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಸಹ ಕಲಾವಿದರನ್ನ ಸೇರಿಸಿದ್ದು, ಕಿರಣಕುಮಾರ ಬೆಟಗೇರಿಯ ಹೆಮ್ಮೆಯಾಗಿದೆ. ಬಿ.ಕಾಂ ಪದವೀಧರರಾಗಿರುವ ಕಿರಣಕುಮಾರ ಅವರ ಕಾರ್ಯವನ್ನ ಸಿನೇಮಾದ ನಿರ್ದೇಶಕ ಸಂತೋಷ ಹಾಗೂ ನಟ ಪುನೀತ ರಾಜಕುಮಾರ ಮೆಚ್ಚಿದ್ದು ಹೆಮ್ಮೆಯ ವಿಷಯವಾಗಿದೆ.
ಗ್ರಾಮೀಣ ಪರಿಸರದಲ್ಲಿ ಬೆಳೆದು ಕನ್ನಡ ಚಿತ್ರರಂಗರದಲ್ಲಿ ತನ್ನದೇ ಛಾಪು ಮೂಡಿಸಲು ಮುಂದಾಗಿರುವ ಕಿರಣಕುಮಾರ ಬೆಟಗೇರಿಗೆ ನಮ್ಮ ಭಾಗದ ಜನರಿಂದ ಪ್ರೋತ್ಸಾಹದ ಅವಶ್ಯಕತೆಯೂ ಹೆಚ್ಚಿದೆ.
ರಜತ ಉಳ್ಳಾಗಡ್ಡಿಮಠ ಶ್ಲಾಘನೆ.

ಹುಬ್ಬಳ್ಳಿ: ಆತ್ಮೀಯ ಹುಬ್ಬಳ್ಳಿಯ ಜನತೆಗೆ ತಿಳಿಸ ಪಡಿಸುವುದು ಏನಂದರೆ ಕರ್ನಾಟಕದ ಮನೆ ಮಗ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಯುವರತ್ನ ಚಿತ್ರದ ಚಿತ್ರೀಕರಣವನ್ನು ನಮ್ಮ ಹುಬ್ಬಳ್ಳಿ-ಧಾರವಾಡದ ಹಲವು ಭಾಗಗಳಲ್ಲಿ ನಡೆಸಿದ್ದಾರೆ.
ಈ ಮೂಲಕ ನಮ್ಮ ಉತ್ತರ ಕರ್ನಾಟಕದ ಸುಮಾರು 300 ಪ್ರತಿಭೆಗಳಿಗೆ ಅವಕಾಶ ನೀಡುವುದರ ಮೂಲಕ ಹಲವು ನೂತನ ಕಲಾವಿದರನ್ನು ಸಿನಿರಂಗಕ್ಕೆ ಪರಿಚಯಿಸಿದ್ದಾರೆ.
ಈಗ ಅವರು ಯುವರತ್ನ ಚಿತ್ರದ ಬಿಡುಗಡೆಗೂ ಮುನ್ನ ಯುವ ಸ್ವಾಭಿಮಾನ ಯಾತ್ರೆಯನ್ನು ಕೈಗೊಂಡಿದ್ದು ಇದೇ ತಿಂಗಳ 21ನೇ ತಾರೀಕು ನಮ್ಮ ಹುಬ್ಬಳ್ಳಿಯ ಅರ್ಬನ್ ಓಯಸಿಸ್ ಮಾಲ್ ನ ಬಳಿ ಸಂಜೆ 4:30 ಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಹೆಚ್ಚಿನ ಅಭಿಮಾನಿಗಳು ಹಾಗೂ ಜನತೆ ಸೇರಬೇಕಾಗಿ ನಿಮ್ಮಲ್ಲಿ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್ ವಿ.ಉಳ್ಳಾಗಡ್ಡಿಮಠ ತಿಳಿಸಿದ್ದಾರೆ.