ಹುಬ್ಬಳ್ಳಿ ಗಾಂಧಿನಗರದಲ್ಲಿ ಮೂವರು “ಕ್ರಿಕೆಟ್ ಬೆಟ್ಟಿಂಗರ” ಬಂಧನ…!

ಹುಬ್ಬಳ್ಳಿ: ಗಾಂಧಿನಗರದ ಮನೆಯೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡ ಕಮೀಷನರೇಟಿನ ಸಿಸಿಬಿ ತಂಡ ಯಶಸ್ವಿಯಾಗಿದೆ.

ಹುಬ್ಬಳ್ಳಿಯ ಮಂಜುನಾಥ ಮುರಳಿಧರ ಪಠ್ಠಣ, ರಾಜು ನಿಜಗುಣಿ ನೂಲ್ವಿ ಹಾಗೂ ಅಮೃತ ಅಶೋಕ ಸೋಳಂಕೆ ಎಂಬುವವರನ್ನ ಬಂಧನ ಮಾಡಲಾಗಿದ್ದು, ಬಂಧಿತರಿಂದ 39280 ರೂಪಾಯಿ ನಗದು, ಎಂಟು ಮೊಬೈಲ್ ಹಾಗೂ ಒಂದು ಟಿವಿಯನ್ನ ವಶಕ್ಕೆ ಪಡೆಯಲಾಗಿದೆ.
ಕಾನೂನು ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜನ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸಪೆಕ್ಟರುಗಳಾದ ಅಲ್ತಾಫ ಮುಲ್ಲಾ, ಭರತ ಎಸ್.ಆರ್ ಹಾಗೂ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಬೆಟ್ಟಿಂಗ್ ಇನ್ನೂ ನಿರಂತರವಾಗಿ ನಡೆಯುತ್ತಿದೆ ಎನ್ನುವುದು ಈ ಪ್ರಕರಣದಿಂದ ಮತ್ತೆ ಬಯಲಾಗಿದೆ.