ಸಂಶಿಯ ಬಳಿಯಲ್ಲಿ “ಕಲ್ಲಹಳ್ಳಿ” ಶವ ಪತ್ತೆ…!

ಧಾರವಾಡ: ಮನೆಯಿಂದ ಹೊರಗೇ ಹೋಗಿದ್ದ ವ್ಯಕ್ತಿಯೊಬ್ಬ ತನ್ನದೇ ಊರಿನ 2 ಕಿಲೋಮೀಟರ್ ಅಂತರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ್ ಸಂಶಿ ಗ್ರಾಮದ ಮಂಜುನಾಥ ರಾಮಣ್ಣ ಕಲ್ಲಹಳ್ಳಿ ಎಂಬ ಸುಮಾರು 35 ವರ್ಷದ ವ್ಯಕ್ತಿ ತನ್ನ ಊರಿನ ಹೊರಗಡೆ ಶವವಾಗಿ ಪತ್ತೆಯಾಗಿದ್ದಾನೆ.
ಗ್ರಾಮಸ್ಥರು ಊರಿನ ಹೊರಗೆ ಬಿದ್ದಿದ್ದ ಮಂಜುನಾಥನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಈತ ಮೃತಪಟ್ಟಿರುವ ಮಾಹಿತಿಯನ್ನು ನೀಡಿದ್ದಾರೆ. ಸಧ್ಯ ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಂದಗೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಜುನಾಥನ ಸಾವಿಗೆ ನಿಜವಾದ ಕಾರಣವೇನು ಎಂಬುದನ್ನ ತಿಳಿಯುವ ಪ್ರುಯತ್ನವನ್ನ ಮಾಡುತ್ತಿದ್ದಾರೆ.