ಮೂರು ಲಕ್ಷ ಸಾಲ: ಕಲ್ಲೆ ಗ್ರಾಮದ ರೈತ ನೇಣಿಗೆ ಶರಣು…!

ಧಾರವಾಡ: ತಾಲೂಕಿನ ಕಲ್ಲೆ ಗ್ರಾಮದ ರೈತನೋರ್ವ ಮಾಡಿದ ಸಾಲವನ್ನ ತೀರಿಸಲಾಗಲಿಲ್ಲವೆಂದು ಬೇಸರ ಮಾಡಿಕೊಂಡು ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ನಡೆದಿದೆ.

ಕಲ್ಲೆ ಗ್ರಾಮದ ಫಕ್ಕೀರಪ್ಪ ಬಸಪ್ಪ ವಾಲೀಕಾರ ಎಂಬ ರೈತ ಶಿರೂರ ಗ್ರಾಮದ ಸ್ಟೇಟ್ ಬ್ಯಾಂಕಿನಲ್ಲಿ ಮೂರು ಲಕ್ಷ ರೂಪಾಯಿ ಬೆಳೆಸಾಲವನ್ನ ಪಡೆದುಕೊಂಡಿದ್ದರು. ಹಿಂಗಾರಿ ಬೆಳೆ ಸರಿಯಾಗಿ ಬಾರದೇ ಇರುವುದರಿಂದ ಸಾಲವನ್ನ ತೀರಿಸಲಾಗಿಲ್ಲ. ಅಷ್ಟೇ ಅಲ್ಲ, ಸಾಲವನ್ನ ತೀರಿಸಲಾಗದೇ ಮಗ ಮತ್ತು ಸೊಸೆ ಮನೆ ಬಿಟ್ಟು ಹೋಗಿದ್ದರು.
ಇದೇ ಕಾರಣದಿಂದ ಮಾನಸಿಕವಾಗಿ ನೊಂದಿದ್ದ ರೈತ ಫಕ್ಕೀರಪ್ಪ ವಾಲೀಕಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.