Karnataka Voice

Latest Kannada News

“2000 ನೋಟ್ ಬ್ಯಾನ್” ಮುನ್ಸೂಚನೆ ನೀಡಿತಾ ಸರಕಾರ…!?

Spread the love

ನವದೆಹಲಿ: ಭಾರತದ ಅತಿ ಹೆಚ್ಚು ಮುಖಬೆಲೆಯ ನೋಟುಗಳ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ 2,000 ಮುಖಬೆಲೆಯ ನೋಟುಗಳನ್ನ ಮುದ್ರಿಸಲಾಗಿಲ್ಲ ಎಂದು ಸರ್ಕಾರ ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದೆ.

2018ರ ಮಾರ್ಚ್ 30ರಂದು 3,362 ದಶಲಕ್ಷ ನೋಟುಗಳು ಚಲಾವಣೆಯಲ್ಲಿದ್ದು, ಕ್ರಮವಾಗಿ ಶೇ.3.27 ಮತ್ತು ಶೇ.37.26ರಷ್ಟು ಚಲಾವಣೆಯಲ್ಲಿವೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2021ರ ಫೆಬ್ರವರಿ 26ರ ಪ್ರಕಾರ, 2,499 ದಶಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು, ಕ್ರಮವಾಗಿ 2.01 ಪ್ರತಿಶತ ಮತ್ತು 17.78 ರಷ್ಟು ನೋಟುಗಳು ಚಲಾವಣೆಯಲ್ಲಿದ್ದವು. ‘ಸಾರ್ವಜನಿಕರ ವಹಿವಾಟುಗಳಿಗೆ ಅನುಕೂಲವಾಗುವಂತೆ ಅಪೇಕ್ಷಿತ ನೋಟುಗಳ ಮಿಶ್ರಣವನ್ನ ನಿರ್ವಹಿಸಲು ಆರ್ ಬಿಐನೊಂದಿಗೆ ಸಮಾಲೋಚಿಸಿ, ನಿರ್ದಿಷ್ಟ ಮುಖಬೆಲೆಯ ನೋಟುಗಳ ಮುದ್ರಣವನ್ನು ಸರ್ಕಾರ ನಿರ್ಧರಿಸುತ್ತದೆ.

2019-20 ಮತ್ತು 2020-21ರ ಅವಧಿಯಲ್ಲಿ ₹2000 ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಮುದ್ರಣಾಲಯಗಳಲ್ಲಿ ಯಾವುದೇ ಇಂಡೆಂಟ್ ಅಳವಡಿಸಿಲ್ಲ. ಇನ್ನು 2016-17ನೇ ಹಣಕಾಸು ವರ್ಷದಲ್ಲಿ (ಏಪ್ರಿಲ್ 2016 ರಿಂದ ಮಾರ್ಚ್ 2017) 3,542.991 ದಶಲಕ್ಷ ನೋಟುಗಳು ಮುದ್ರಣವಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ 2019ರಲ್ಲಿ ತಿಳಿಸಿತ್ತು.

ಆದರೆ, 2017-18ರಲ್ಲಿ 111.507 ದಶಲಕ್ಷ ನೋಟುಗಳನ್ನು ಮುದ್ರಿಸಲಾಗಿದ್ದು, 2018-19ನೇ ಸಾಲಿನಲ್ಲಿ 46.690 ದಶಲಕ್ಷ ನೋಟುಗಳು ಚಲಾವಣೆಗೆ ಬಂದಿದೆ. ಏಪ್ರಿಲ್ 2019 ರಿಂದ ಯಾವುದೇ ಹೊಸ ₹2,000 ನೋಟುಗಳನ್ನು ಮುದ್ರಿಸಿರಲಿಲ್ಲ. ಈ ಕ್ರಮವು ಅಧಿಕ ಮೌಲ್ಯದ ಕರೆನ್ಸಿ(Currency )ಯನ್ನು ಸಂಗ್ರಹ ಮಾಡುವುದನ್ನ ತಡೆಗಟ್ಟುವ ಮತ್ತು ಕಪ್ಪು ಹಣವನ್ನ ನಿಯಂತ್ರಿಸುವ ಪ್ರಯತ್ನವಾಗಿ ಕಂಡು ಬರುತ್ತಿದೆ. ಅಂದ್ಹಾಗೆ, ಕಪ್ಪು ಹಣ ಮತ್ತು ನಕಲಿ ನೋಟುಗಳನ್ನು ನಿಯಂತ್ರಿಸುವ ಪ್ರಯತ್ನವಾಗಿ ₹500 ಮತ್ತು ₹1,000 ನೋಟುಗಳನ್ನು ಸರ್ಕಾರ ಹಿಂತೆಗೆದುಕೊಂಡ ಕೆಲವೇ ದಿನಗಳಲ್ಲಿ ನವೆಂಬರ್ 2016ರಲ್ಲಿ ₹2,000 ನೋಟುಗಳನ್ನ ಪರಿಚಯಿಸಲಾಯಿತು.

ಹೊಸ ₹500 ನೋಟು ಮುದ್ರಣಗೊಂಡಾಗ ₹ 1,000 ನೋಟುಗಳನ್ನ ರದ್ದು ಮಾಡಲಾಯಿತು. ಬದಲಿಗೆ ₹ 2,000 ನೋಟನ್ನು ಪರಿಚಯಿಸಲಾಯಿತು. ₹ 2000 ಹೊರತುಪಡಿಸಿ, ಚಲಾವಣೆಯಲ್ಲಿರುವ ಇತರ ಕರೆನ್ಸಿ ನೋಟುಗಳೆಂದ್ರೆ, ₹10, ₹ 20, ₹ 50 ಮತ್ತು ₹ 100.


Spread the love

Leave a Reply

Your email address will not be published. Required fields are marked *