ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಶಾಸಕ ಶಂಕರ ಪಾಟೀಲಮುನೇನಕೊಪ್ಪ…!
        ಹುಬ್ಬಳ್ಳಿ: ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರು ಹುಬ್ಬಳ್ಳಿಯ ಕಿಮ್ಸನಲ್ಲಿ ಇಂದು ಕೋವಿಡ-19 ಲಸಿಕೆಯನ್ನ ಪಡೆದರು.

ಕಿಮ್ಸನ ನಿರ್ದೇಶಕರು ಸೇರಿದಂತೆ ಹಿರಿಯ ವೈಧ್ಯರ ಸಮ್ಮುಖದಲ್ಲಿ ಲಸಿಕೆ ಪಡೆದ ಶಾಸಕ ಮುನೇನಕೊಪ್ಪ ಅವರು, ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಅರ್ಹರಿರುವ ಎಲ್ಲರೂ ಯಾವುದೇ ಭಯ-ಆತಂಕವಿಲ್ಲದೇ ಲಸಿಕೆ ಪಡೆಯಬೇಕೆಂದು ವಿನಂತಿಸಿದರು.
ಕೊರೋನಾ ಮಹಾಮಾರಿಯನ್ನ ತಡೆಗಟ್ಟಲು ಲಸಿಕೆ ಹಾಕಿಸಿಕೊಳ್ಳುವುದು ಅವಶ್ಯವಿದೆ ಎಂದು ಸರಕಾರ ಈಗಾಗಲೇ ಹೇಳಿದ್ದು, ಜನಪ್ರತಿನಿಧಿಗಳು ಇದನ್ನ ಹಾಕಿಸಿಕೊಂಡು ಜನರಲ್ಲಿ ಭಯವನ್ನ ದೂರ ಮಾಡುತ್ತಿದ್ದಾರೆ.
ಧಾರವಾಡ ಗ್ರಾಮಾಂತರ ಭಾಗದಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಅವರು ಲಸಿಕೆ ಹಾಕಿಸಿಕೊಂಡ ಮೊದಲ ಶಾಸಕರಾಗಿದ್ದಾರೆ.
                      
                      
                      
                      
                      