ಹುಬ್ಬಳ್ಳಿಯ ಗುಡಿಹಾಳ ರಸ್ತೆಯಲ್ಲಿ ಧಗ ಧಗ ಬೆಂಕಿ…!

ಹುಬ್ಬಳ್ಳಿ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹಳೇಹುಬ್ಬಳ್ಳಿಯ ಗುಡಿಹಾಳ ರಸ್ತೆಯಲ್ಲಿರುವ ಸ್ಕ್ಯಾಪ್ ಅಡ್ಡೆಗೆ ಬೆಂಕಿ ತಗುಲಿದ್ದು, ಹಲವಾರು ಕಾರುಗಳು ಸೇರಿದಂತೆ ಹಲವು ವಸ್ತುಗಳು ಸುಟ್ಟು ಕರಕಲಾಗುತ್ತಿವೆ.

ಗುಡಿಹಾಳ ರಸ್ತೆಯ ಆರ್ ಕೆ ಹಾಲ್ ಬಳಿಯಿರುವ ಸ್ಕ್ಯಾಪ್ ಅಡ್ಡೆಗೆ ಬೆಂಕಿ ತಗುಲಿದ್ದು, ಖರೀದಿ ಮಾಡಿ ತಂದಿದ್ದ ಹಲವು ವಾಹನಗಳಿಗೆ ಬೆಂಕಿ ತಗುಲಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಡ್ಡೆಯಲ್ಲಿರುವ ಕೆಲವು ಆಯಿಲ್ ಮಿಶ್ರಿತ ವಸ್ತುಗಳಿಗೆ ಹೆಚ್ಚು ಬೆಂಕಿ ತಗುಲಿದ್ದರಿಂದ, ಬೆಂಕಿಯ ಕೆನ್ನಾಲಿಗೆ ಹಬ್ಬುತ್ತಿದೆ.
ಸ್ಥಳದಲ್ಲಿ ಸಾರ್ವಜನಿಕರು ಕೂಡಾ ಬೆಂಕಿಯನ್ನ ನಂದಿಸಲು ಸಹಕಾರ ನೀಡುತ್ತಿದ್ದು, ಬೆಂಕಿ ಮಾತ್ರ ಪ್ರತಿಕ್ಷಣವೂ ಹೆಚ್ಚಾಗುತ್ತಿದೆ.