ಪಾರ್ಕಲ್ಲಿ ಹೆರಿಗೆ ಮಾಡಿಸಿದ ದೈಹಿಕ ಶಿಕ್ಷಣ ಶಿಕ್ಷಕಿ…!

ಮೈಸೂರು: ಇಂತಹ ಘಟನೆಗಳು ನಡೆಯುವುದು ಮತ್ತು ನೋಡುವುದು ಕೇವಲ ಸಿನೇಮಾದಲ್ಲಿ ಮಾತ್ರ ಇರಬಹುದೇನೋ. ಆದರೆ, ಎಲ್ಲರೂ ಅಚ್ಚರಿ ಪಡುವಂತಹ ಘಟನೆಯೊಂದು ನಡೆದಿದ್ದು, ಸರಕಾರಿ ಶಾಲೆಯ ಶಿಕ್ಷಕಿಯೋರ್ವರ ಧೈರ್ಯವನ್ನ ಎಲ್ಲರೂ ಕೊಂಡಾಡುವಂತಾಗಿದೆ…
ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಹೌದು.. ನಡೆದದ್ದು ಏನೂ ಗೊತ್ತಾ. ಕೊಡಗು ಮೂಲದ ಗರ್ಭೀಣಿ ಮಹಿಳೆಯೋರ್ವರು ತಮ್ಮ ಮಕ್ಕಳೊಂದಿಗೆ ಮೈಸೂರಿಗೆ ಬಂದು ಸಬರ್ಬನ್ ಬಸ್ ನಿಲ್ದಾಣದ ಹತ್ತಿರವಿರುವ ಪೀಪಲ್ ಪಾರ್ಕಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಸಡನ್ನಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಚೀರಾಟ ಹೆಚ್ಚಾದ ತಕ್ಷಣವೇ ಅಲ್ಲಿಯೇ ಇದ್ದ ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ, ಓಡೋಡಿ ಬಂದು ಹೆರಿಗೆಯನ್ನ ಮಾಡಿಸಿದ್ದಾರೆ. ಯಾವುದೇ ರೀತಿಯ ಆತಂಕ ಪಡದೇ ಮಗುವನ್ನ ಕೈಯಲ್ಲಿ ಹಿಡಿದು ತಾಯಿಗೆ ಹಾಲುಣಿಸುವಂತೆ ಹೇಳಿದ್ದಾರೆ.
ಪಾರ್ಕಲ್ಲಿದ್ದ ಹಲವರು ಈ ಎಲ್ಲ ದೃಶ್ಯಗಳನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಮಹಿಳೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಹೆರಿಗೆಯಾಗಿದ್ದು, ಸಾರ್ವಜನಿಕರು ಅಂಬ್ಯಲೆನ್ಸಗೆ ಮಾಹಿತಿ ನೀಡಿ ಕರೆಸಿದ್ದಾರೆ. ನಂತರ ಪಾರ್ಕಲ್ಲಿದ್ದ ಮಹಿಳೆಯನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಅವರ ಈ ಕಾರ್ಯವನ್ನ ಎಲ್ಲರೂ ಮೆಚ್ಚುವಂತಾಗಿದೆ.