ಹುಬ್ಬಳ್ಳಿಗೆ ಅಸಾವುದ್ಧೀನ ಓವೈಸಿ…!

ಹೈದ್ರಾಬಾದ್: ವಾಣಿಜ್ಯನಗರಿ ಹುಬ್ಬಳ್ಳಿಗೆ ಎಐಎಂಐಎಂ ಮುಖ್ಯಸ್ಥ ಅಸಾವುದ್ಧೀನ ಓವೈಸಿ ಶೀಘ್ರದಲ್ಲಿ ಬರುವ ಇಂಗಿತವನ್ನ ವ್ಯಕ್ತಪಡಿಸಿರುವ ವೀಡಿಯೊಂದು ವೈರಲ್ ಆಗಿದೆ.
ಅವಳಿನಗರದಲ್ಲಿ ಈಗಾಗಲೇ ಪಕ್ಷದ ಸಂಘಟನೆ ಚೂರು ಜೋರಾಗಿಯೇ ನಡೆದಿದ್ದು, ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಎಂಎಲ್ಎ ಆಕಾಂಕ್ಷಿಗಳು ಜನರ ಬಳಿ ಹೋಗುತ್ತಿದ್ದಾರೆ. ಹೀಗಾಗಿ, ಪಕ್ಷದ ಪ್ರಮುಖ ಅಸಾವುದ್ಧೀನ ಓವೈಸಿ ಬರುವಿಕೆಯನ್ನ ಕಾಯುತ್ತಿದ್ದಾರೆ.
ಈ ಎಲ್ಲ ಕಾರಣಗಳಿಂದ ಸ್ವತಃ ಅಸಾವುದ್ಧೀನ ಓವೈಸಿಯವರೇ ಹೇಳಿಕೆ ನೀಡಿದ್ದು, ಆದಷ್ಟು ಬೇಗನೇ ಹುಬ್ಬಳ್ಳಿಗೆ ಬಂದು ಸಮಾವೇಶದಲ್ಲಿ ಭಾಗವಹಿಸುವುದಾಗಿ ಮಾತನಾಡಿದ್ದಾರೆ.
ರಂಜಾನ್ ಹಬ್ಬದ ಮೊದಲೆ ವಾಣಿಜ್ಯನಗರಿಗೆ ಬರುವ ಬಗ್ಗೆ ಮಾತನಾಡಿರುವ ಓವೈಸಿಯವರ ವೀಡಿಯೋ, ಇದೀಗ ಅವಳಿನಗರದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪನ್ನ ಮೂಡಿಸಿದೆ.
ವೇದಿಕೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ನಜೀರ ಅಹ್ಮದ ಹೊನ್ಯಾಳ, ರಾಕೇಶ ಬಸವರಾಜ ಸೇರಿದಂತೆ ಹುಬ್ಬಳ್ಳಿ ಮುಸ್ಲಿಂ ಸಮಾಜದ ಕೆಲ ಪ್ರಮುಖರು ಉಪಸ್ಥಿತರಿದ್ದರು.