ಧಾರವಾಡದಲ್ಲಿ ಅಪಘಾತ: ಶೆಟ್ಟಿ ಸಾವು

ಧಾರವಾಡ: ನಗರದ ಎನ್ ಟಿಟಿಎಫ್ ಬಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಇಂದು ಬೆಳಿಗ್ಗೆ ವಿದ್ಯಾಗಿರಿ ನಿವಾಸಿಯಾದ ಸುಭಾಸಚಂದ್ರ ವಿಠ್ಠಲ ಶೆಟ್ಟಿ ಎನ್ನುವವರು ಸ್ಕೂಟರಲ್ಲಿ ಬರುತ್ತಿದ್ದ ಸಮಯದಲ್ಲಿ ಕಾರೊಂದು ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ತೀವ್ರವಾಗಿ ರಕ್ತಸ್ರಾವವಾಗಿತ್ತು.
ತಕ್ಷಣವೇ ಸುಭಾಸಚಂದ್ರರನ್ನ ಕಿಮ್ಸಗೆ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಸುಭಾಸಚಂದ್ರ ಶೆಟ್ಟಿಯವರು ಸಾವಿಗೀಡಾಗಿದ್ದಾರೆ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಧಾರವಾಡ ಸಂಚಾರಿ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.