ದಿನೇಶ ಕಲ್ಲಳ್ಳಿ ದೂರು ವಾಪಸ್: ಬಾಲಚಂದ್ರ ಜಾರಕಿಹೊಳಿ ಮಾತನಾಡಿದ್ದಾರೆ….!
1 min readಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ್ದ ಮಾನವ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇದೀಗ ಕೇಸ್ ವಾಪಸ್ ಪಡೆಯಲು ಮುಂದಾದ ಬೆನ್ನಲ್ಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದ್ದಾರೆ.
ಬೆಂಗಳೂರಿನ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಮಾಧ್ಯಮದವರಿಗೆ ಒಂದು ವಿನಂತಿ ಮಾಡಿಕೊಳ್ಳುತ್ತೇನೆ ಸಿಡಿಯಲ್ಲಿರುವ ಮಹಿಳೆ ಸಂತ್ರಸ್ತ ಮಹಿಳೆ ಎಂದು ದಯವಿಟ್ಟು ಹೇಳಬೇಡಿ. ಯಾಕೆಂದರೆ ಇದರಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಮಹಿಳೆಯ ಹಿಂದೆ ಇನ್ನೂ ಮೂರು ಜನರಿದ್ದಾರೆ. ಒಟ್ಟು 15 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದರು.
ದೂರು ನೀಡುವ ಮುನ್ನವೇ ದೃಶ್ಯ ಯೂಟೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ದಯವಿಟ್ಟು ಮನೆಯಿಂದ ಹೊರಗೆ ಬಂದು ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆಗೆ ಮಾಹಿತಿ ನೀಡಲಿ. ಸಿಡಿ ಪ್ರಕರಣದ ವಿರುದ್ಧ ದೂರು ನೀಡಲಿ ಎಂದು ಹೇಳಿದರು.
ದೂರು ವಾಪಸ್..
ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಳ್ಳಿ ಸಲ್ಲಿಸಿದ್ದ ದೂರನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ತಮ್ಮ ವಕೀಲರ ಮೂಲಕ ಪೊಲೀಸ್ ಠಾಣೆಗೆ ಪತ್ರ ಕಳಿಸಿದ್ದಾರೆ ದಿನೇಶ ಕಲ್ಲಳ್ಳಿ.
ರಮೇಶ ಜಾರಕಿಹೊಳಿ ಯುವತಿಯೋರ್ವಳಿಗೆ ಕೆಲಸ ಕೊಡುವುದಾಗಿ ಹೇಳಿ ವಂಚಿಸಿದ್ದಾರೆ. ಲೈಂಗಿಕ ಶೋಷಣೆ ಮಾಡಿದ್ದಾರೆಂದು ವೀಡಿಯೋ ಸಹಿತ ದಿನೇಶ ಕಲ್ಲಳ್ಳಿ ಮಾರ್ಚ 2ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಪ್ರಕರಣದಲ್ಲಿ 5 ಕೋಟಿ ಡೀಲ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯಿಂದ ಬೇಸತ್ತು ದೂರನ್ನ ಹಿಂದೆ ಪಡೆಯುತ್ತಿರುವುದಾಗಿ ದಿನೇಶ ಕಲ್ಲಳ್ಳಿ ಹೇಳಿದ್ದಾರೆ.