Posts Slider

Karnataka Voice

Latest Kannada News

ತಮ್ಮ ನೇಣಿಗೆ: ವಾಟ್ಸಾಪ್ ನೋಡಿ ಅಣ್ಣನೂ ನೇಣಿಗೆ ಕೊರಳೊಡ್ಡಿದ್ದ- ಮನಕಲಕುವ ಪ್ರಕರಣ…!

1 min read
Spread the love

ಹುಟ್ತಾ ಹುಟ್ತಾ ಅಣ್ಣ-ತಮ್ಮಂದಿರು.. ಬೆಳೀತಾ ಬೆಳೀತಾ ದಾಯಾದಿಗಳು ಅನ್ನೋದನ್ನ ಇವರಿಬ್ಬರು ಮರೆ ಮಾಚಿದ್ದಾರೆ…!

ಮೈಸೂರು: ತನ್ನ ತುಂಬಾ ಪ್ರೀತಿಸುವ ಅಣ್ಣ ಹೇಳಿದ ಬುದ್ಧಿ ಮಾತನ್ನೇ ತಪ್ಪಾಗಿ ಅರ್ಥೈಸಿಕೊಂಡ ತಮ್ಮ ನೇಣಿಗೆ ಶರಣಾಗಿ ಸಾವನ್ನಪ್ಪಿದ ದೃಶ್ಯವನ್ನ ಮೊಬೈಲ್ ನೋಡಿದ, ಸಹೋದರನೋರ್ವ, ಆತನ ಸಾವಿಗೆ ತಾನೇ ಕಾರಣವೆಂದುಕೊಂಡು, ತಾನೂ ಕೂಡಾ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆಯೊಂದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

Venktesh and Harish

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದ ವೆಂಕಟೇಶ ಮನೆಯಲ್ಲಿ ಸಣ್ಣವನಾಗಿದ್ದರಿಂದ ಮನೆಯಲ್ಲಿ ಎಲ್ಲರಿಗೂ ಮುದ್ದು ಮುದ್ದಾಗಿದ್ದ. ಆದರೆ, ಟ್ರ್ಯಾಕ್ಟರನ್ನ ಅತೀ ವೇಗವಾಗಿ ಚಲಾಯಿಸುತ್ತಿದ್ದ. ಇದೇ ಕಾರಣಕ್ಕೆ ತಂದೆ ಚಿನ್ಮಯಗೌಡ ಚೂರು ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಹರೀಶ ಕೂಡಾ, ವೆಂಕಟೇಶನಿಗೆ ಮಾತಾಡಿ ಬುದ್ಧಿ ಹೇಳಿದ್ದ.

ಇದೇ ಕಾರಣದಿಂದ ಮನನೊಂದ ವೆಂಕಟೇಶ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದೃಶ್ಯವನ್ನ ಹರೀಶನಿಗೆ ಆತನ ಗೆಳೆಯರು ಮೊಬೈಲ್ ಮೂಲಕ ಕಳಿಸಿದ್ದಾರೆ. ಇದನ್ನ ನೋಡಿದ್ದೆ ತಡ, ಹರೀಶ ಕೂಡಾ ತನ್ನೂರಿಗೆ ಬರದೇ ಸರಗೂರು ರಸ್ತೆಯ ಬಳಿ ನೇಣಿಗೆ ಶರಣಾಗಿದ್ದಾನೆ.

ಇಬ್ಬರು ಅಣ್ಣ-ತಮ್ಮಂದಿರ ಶವಗಳನ್ನ ಮನೆಯ ಮುಂದೆ ಕೆಲಕಾಲವಿಟ್ಟು ಒಂದೇ ಜಾಗದ ಅಕ್ಕಪಕ್ಕದಲ್ಲಿ ಶವಸಂಸ್ಕಾರ ಮಾಡಲಾಯಿತು. ಒಡಹುಟ್ಟಿದವರು ಒಂದೇ ರೀತಿಯಲ್ಲಿ ಸಾವಿಗೀಡಾಗಿದ್ದನ್ನ ನೋಡಿ, ಊರಿಗೆ ಊರೇ ಕಣ್ಣೀರಾಗಿತ್ತು. ಪಾಲಕರ ಸ್ಥಿತಿಯಂತೂ ಆ ದೇವರೇ ಕಾಪಾಡಬೇಕು.


Spread the love

Leave a Reply

Your email address will not be published. Required fields are marked *

You may have missed