ನವಲಗುಂದ ಲಾರಿ ಮಾಲೀಕರ ಬೃಹತ್ ಪ್ರತಿಭಟನೆ..!

ನವಲಗುಂದ: ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯ ಜೊತೆಗೆ ವಾಹನಗಳ ಬಿಡಿ ಭಾಗಗಳ ದರಗಳು ಹೆಚ್ಚಾಗಿರುವುದನ್ನ ಖಂಡಿಸಿ ತಾಲೂಕಿನ ಶ್ರೀ ಅಜಾತ ನಾಗಲಿಂಗೇಶ್ವರ ಲಾರಿ ಮಾಲಿಕರ ಸಂಘದ ನಗರದಲ್ಲಿಂದು ಪ್ರತಿಭಟನೆ ನಡೆಸಿತು.
ಪ್ರತಿ ದಿನವೂ ಅವಶ್ಯವಿರುವ ಪೆಟ್ರೋಲ್, ಡಿಸೇಲ್ ದರಗಳು ಏರಿಕೆಯಾಗುತ್ತಿರುವುದು ಇದು ಬಡವರ ಮೇಲೆ ಪರಿಣಾಮ ಬೀರುತ್ತಿವೆ ಎಂದು ದೂರಿದ ಪ್ರತಿಭಟನಾನಿತರತರು, ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನೆ ನಡೆಸುತ್ತಿದ್ದವರು, ತಹಶೀಲ್ದಾರರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರವನ್ನ ನೀಡಿದರು.
ಲಾರಿ ಸಂಘದ ಅಧ್ಯಕ್ಷ ರಾಜು ಜಾಲಿಹಾಳ, ಉಪಾಧ್ಯಕ್ಷ ಸಿದ್ದಪ್ಪ ಗಾಣಿಗೇರ, ಕಾರ್ಯದರ್ಶಿ ಖಾಜೇಸಾಬ ಹುಗ್ಗಿ, ಪುರಸಭೆ ಸದಸ್ಯ ಮಹಾಂತೇಶ ಭೋವಿ, ಕಾರ್ಯದರ್ಶಿ ಖಾಜೇಸಾಬ ಹಂಚಿನಾಳ, ಕೊಟ್ರೇಶ ಹಿರೇಮಠ, ಸುಲೇಮಾನ ನಾಶಿಪುಡಿ, ಚೇತನ ಲಕ್ಕಣ್ಣನವರ, ಹೈದರಲಿ ಜಮಖಾನ, ಆನಂದ ಕುಮ್ಮಿ, ಭರತ ಜಾಧವ, ಖಾಜಾ ಗುತ್ತಲ, ಮುನ್ನಾ ಕಲ್ಲಕುಟ್ರಿ, ಮೊಹ್ಮದ ಜಿಗಳೂರು, ಮಂಜು ಮೆಣಸಿನಕಾಯಿ, ಮಂಜು ಧೋಬಿ, ರಮೇಶ ಅಂಗಡಿ, ಆನಂದ ಇಬ್ರಾಹಿಂಪುರ, ಮಂಜು ಯರಗಟ್ಟಿ, ನೀಲಿ ಬಾಷಾ, ಅಕ್ಷಯ ಚವ್ಹಾಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.