Posts Slider

Karnataka Voice

Latest Kannada News

ಹಸುಗೂಸಿಗೆ ಹಾಲುಣಿಸುತ್ತಿದ್ದಾಗಲೇ ಪತ್ನಿಗೆ ಚಾಕು ಇರಿದ ಪಾಪಿ ಪತಿ…!

Spread the love

ಹುಬ್ಬಳ್ಳಿ: ಮನೆಯಲ್ಲಿನ ಮಾನಸಿಕ ತುಮಲಗಳಿಂದ ನಡೆಯುತ್ತಿದ್ದ ಜಗಳಗಳಿಂದ ರೋಸಿ ಹೋದ ಪತಿಯೋರ್ವ ಬೆಳ್ಳಂಬೆಳಿಗ್ಗೆ ಪತ್ನಿಗೆ ಚಾಕುಯಿರಿದ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್ ಗಂಗಾಧರನಗರದಲ್ಲಿ ಸಂಭವಿಸಿದೆ.

ಸೆಟ್ಲಮೆಂಟ್ ನಿವಾಸಿಯಾಗಿರುವ ಸುನೀಲ ಎಂಬಾತನೇ ತನ್ನ ಹೆಂಡತಿ ಸಂಗೀತಾ ಎಂಬುವವರಿಗೆ ಚಾಕುವಿನಿಂದ ಇರಿದಿದ್ದು, ಗಂಭೀರವಾಗಿ ಮಹಿಳೆ ಗಾಯಗೊಂಡಿದ್ದಾಳೆ.

ಎರಡು ತಿಂಗಳ ಮಗುವನ್ನ ಕಂಕುಳಲ್ಲಿ ಹಿಡಿದುಕೊಂಡು ಕೂತಾಗಲೇ ಪತಿ ಚಾಕುವಿನಿಂದ ಇರಿದಿದ್ದರಿಂದ ಮಗು ಕೂಡಾ ಗಾಬರಿಯಾಗಿ ಅಳತೊಡಗಿದೆ. ಇದರಿಂದ ಅಕ್ಕಪಕ್ಕದವರು ಬಂದಿದ್ದು, ಪತಿ ಸುನೀಲ ಪರಾರಿಯಾಗಿದ್ದಾನೆ.

ತೀವ್ರವಾಗಿ ಗಾಯಗೊಂಡಿರುವ ಸಂಗೀತಾಳನ್ನ ಚಿಕಿತ್ಸೆಗಾಗಿ ಕಿಮ್ಸಗೆ ತರಲಾಗಿದ್ದು, ಆರೋಗ್ಯ ಗಂಭೀರವಾಗಿದೆ. ಸಂಬಂಧಿಕರು ಮಗುವನ್ನ ಉಪಚರಿಸುತ್ತಿದ್ದಾರೆ. ಘಟನೆಯ ಬಗ್ಗೆ ಬೆಂಡಿಗೇರಿ ಠಾಣೆಯ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *