ಕಾನೂನು ಗಾಳಿಗೆ ತೂರುವುದೇ BRTS ಕೆಲಸ: ಬೆಕ್ಕಿಗೆ ಗಂಟೆ ಕಟ್ಟೋರು ಯಾರೂ…!
ಧಾರವಾಡ: ಅವಳಿನಗರದ ಮಧ್ಯೆದಲ್ಲಿ ಬಿಆರ್ ಟಿಎಸ್ ಮಾರ್ಗದಲ್ಲಿ ಸಂಚರಿಸುವ ಚಿಗರಿ ಬಸ್ಸುಗಳು ಸಂಚಾರಿ ನಿಯಮಗಳನ್ನ ಮುರಿಯುವುದೇ ತಮ್ಮ ಧ್ಯೇಯ ಎನ್ನುವಂತೆ ವಾಹನಗಳನ್ನ ಚಲಾಯಿಸುತ್ತಿದ್ದಾರೆ. ಅವರಿಗೆ ಹೇಳುವವರೂ ಕೇಳುವವರೂ ಹುಬ್ಬಳ್ಳಿ-ಧಾರವಾಡದಲ್ಲಿ ಯಾರೂ ಇಲ್ಲವಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಹಾಗೇ ಸಾಕ್ಷಿ ಸಮೇತ ಕರ್ನಾಟಕವಾಯ್ಸ್.ಕಾಂ ನಿಮ್ಮ ಮುಂದೆ ಮಾಹಿತಿಯನ್ನಿಡುತ್ತಿದೆ ನೀವೇ ನೋಡಿ..
ವೀಡಿಯೋ ನೋಡಿ, ಮಾಹಿತಿಯನ್ನ ಓದಿ…
ಈ ದೃಶ್ಯಗಳನ್ನ ನೋಡಿದ ಮೇಲೆ ನಿಮಗೆ ಸತ್ಯ ಗೊತ್ತಾಗತ್ತೆ. ಬಿಆರ್ ಟಿಎಸ್ ಮಾರ್ಗದಲ್ಲಿ ಸಂಚರಿಸಿದ ಅಂಬ್ಯುಲೆನ್ಸಗೂ ದಂಡ ಹಾಕುವ ಆಸಾಮಿಗಳು, ತಾವು ಮಾತ್ರ ಕೆಂಪು ದೀಪ ಹತ್ತಿದರೂ, ಯಾವುದೇ ಮುಲಾಜಿಲ್ಲದೇ ಸಂಚಾರ ನಡೆಸುತ್ತಾರೆ. ಇವರಿಗೆ ಯಾವುದೇ ರೀತಿಯ ಸಂಚಾರ ನಿಯಮಗಳು ಪಾಲಿಸಬಾರದೆಂದು ಬಿಆರ್ ಟಿಎಸ್ ಸೂಚನೆ ನೀಡಿದೇಯಾ.
ಬಹುತೇಕ ಪ್ರದೇಶದಲ್ಲಿರುವ ಸಿಗ್ನಲಗಳಲ್ಲಿ ಚಿಗರಿ ಬಸ್ ಚಾಲಕರು ನಿಲ್ಲಿಸುವುದೇ ಇಲ್ಲ. ಓರ್ವ ಕ್ಯಾಮರಾ ನೋಡಿ ನಿಲ್ಲಿಸಿದ್ದನ್ನ ಬಿಟ್ಟರೇ, ಚಿಗರಿ ಬಸ್ ಗಳಿರುವುದೇ ಕಾನೂನನ್ನ ಗಾಳಿಗೆ ತೂರಲು ಎನ್ನುವಂತಾಗಿದೆ. ಯಾವುದೇ ಲಂಗು ಲಗಾಮಿಲ್ಲದೇ ಸಂಚರಿಸುವ ಚಿಗರಿ ಬಸ್ ಗಳು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೇ, ಸಂಚಾರಿ ಠಾಣೆಯ ಪೊಲೀಸರು ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಯಮ ಸ್ವರೂಪಿಯಂತೆ ವೇಗವಾಗಿ ಸಿಗ್ನಲಗಳಲ್ಲಿ ಸಂಚರಿಸುವ ಚಿಗರಿ ಎಂಬ ಅವಿವೇಕಿ ಬಸ್ ಗಳಿಗೆ ಸಂಚಾರ ನಿಯಮದ ಪಾಠವನ್ನ ಪೊಲೀಸರು ಕಲಿಸುತ್ತಾರಾ ಅಥವಾ ಗ್ರಾಮೀಣ ಪ್ರದೇಶದಿಂದ ಬರುವ ಬಡವರ ಡಾಕುಮೆಂಟ್ ಚೆಕ್ ಮಾಡಿಕೊಂಡು ರಸ್ತೆಯುದ್ದಕ್ಕೂ ನಿಲ್ಲುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.