ಸೆಟ್ರ್ ಸ್ ಮುರಿದು ಕಳ್ಳತನ: ಫೈರೋಜ್ ಬಂಧನ

ಹುಬ್ಬಳ್ಳಿ: ಬಟ್ಟೆ ಅಂಗಡಿಯ ಸೆಟ್ರ್ ಸ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶ್ರೀಧರನಗರದ ಫೈರೋಜ ಜಪ್ರೀ ರಾಜೇಸಾಬ ಎಂಬಾತ, ಇತ್ತೀಚೆಗೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಲ್ಲಿರುತ್ತಿದ್ದ. ಈತನೇ ಬಟ್ಟೆ ಅಂಗಡಿಯ ಸೆಟ್ರಸ್ ಮುರಿದು ಕಳ್ಳತನ ಮಾಡುತ್ತಿದ್ದ.
ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ರವಿಚಂದ್ರ ಬಡಫಕ್ಕೀರಪ್ಪನವರ, ಪಿಎಸ್ಐ ಆರ್.ಎಂ.ಕಾಲವಾಡ, ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 4150 ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದು, ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.