ಗ್ರಾಮ ವಾಸ್ತವ್ಯ ಮಾಡು ಅಂದ್ರೇ, ಮೋಜು ಮಸ್ತಿ ಮಾಡಿದ ತಹಶೀಲ್ದಾರ…!

ಕೋಲಾರ: ಸರಕಾರದ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯವನ್ನ ತಹಶೀಲ್ದಾರ ಸಮೇತ ಅಧಿಕಾರಿ ವರ್ಗ ಮೋಜು ಮಸ್ತಿಗೆ ಬಳಕೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನರಿನತ್ತ ಗ್ರಾಮದಲ್ಲಿ ನಡೆದಿದೆ.
ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಬಂಗಾರಪೇಟೆ ತಹಶೀಲ್ದಾರ ದಯಾನಂದ್, ಸಮಾಜ ಕಲ್ಯಾಣ ಅಧಿಕಾರಿ ಮುನಿರಾಜ್, ಪಿಡಿಓ ಹಾಗೂ ವಿಎಗಳ ಜೊತೆ ಡಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
ಮನೆಬಾಗಿಲಿಗೆ ಸರ್ಕಾರದ ಸವಲತ್ತುಗಳನ್ನು ನೀಡುವ ಹಾಗೂ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ಡಿಸಿ ಹಾಗೂ ತಹಶೀಲ್ದಾರ್ ಗ್ರಾಮವಾಸ್ತವ್ಯಕ್ಕೆ ಚಾಲನೆಯನ್ನ ಸರಕಾರ ನೀಡಿದ್ದು, ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವುದು ಬಿಟ್ಟು ಡ್ಯಾನ್ಸ್ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಕಾರಣವಾಗಿದ್ದಾರೆ.