ಅಳಗವಾಡಿಯಲ್ಲಿ ರೈತ ಆತ್ಮಹತ್ಯೆ…!

ನವಲಗುಂದ: ಸಾಲದ ಹೊರೆಯನ್ನ ಇಳಿಸುವುದು ಹೇಗೆ ಎಂಬ ಚಿಂತೆಯಲ್ಲೇ ಮಾನಸಿಕವಾಗಿ ನೊಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಹೊಸ ಪ್ಲಾಟಿನಲ್ಲಿ ನಡೆದಿದೆ.

37 ವಯಸ್ಸಿನ ಯಲ್ಲಪ್ಪ ಹನಮಪ್ಪ ಬಸಿಡೋಣಿ ಎಂಬಾತನೇ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಅಳಗವಾಡಿ ಗ್ರಾಮದ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಲ್ಲಿ ಒಂದು ಲಕ್ಷ ರೂಪಾಯಿ ಬೆಳೆಸಾಲ ಹಾಗೂ ಗಡದೇಶ್ವರ ಮಹಿಳಾ ಸ್ವಸಹಾಯ ಗುಂಪಿನಲ್ಲಿ ಮಡದಿಯ ಹೆಸರಿನಲ್ಲಿ 20 ಸಾವಿರ ರೂಪಾಯಿ ಸಾಲವನ್ನ ಪಡೆದಿದ್ದು, ಬೆಳೆ ಸರಿಯಾಗಿ ಬಾರದೇ ಇರುವುದರಿಂದ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಘಟನೆಯ ಬಗ್ಗೆ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.