ಅಂದು ಮಲ್ಲಪ್ಪ ಶೆಟ್ಟಿ… ಇಂದು ಜಗದೀಶ ಶೆಟ್ಟರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ..!

ಬೆಂಗಳೂರು: ಕ್ಯಾಬಿನೆಟ್ ಸಭೆಯಲ್ಲಿ ಪಂಚಮಸಾಲಿಗಳಿಗೆ 2ಎ ಕೊಡದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸಚಿವ ಜಗದೀಶ ಶೆಟ್ಟರ ಹಾಗೂ ಲಕ್ಷ್ಮಣ ಸವದಿ ಹೇಳಿದ್ದಾರೆಂದು ಆರೋಪಿಸಿ, ಇವರಿಬ್ಬರು ಮುಖಂಡರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹಲವರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.

ಆನಂದ ಮಗದುಮ್ ಎನ್ನುವವರು ತಮ್ಮ ಪೇಜಿನಲ್ಲಿ, ಜಗದೀಶ ಶೆಟ್ಟರ ಸಾಹೇಬ್ರಿಗೆ ನನ್ನ ನಮಸ್ಕಾರಗಳು. ಅಂದು ಅಂದರೆ ನಮ್ಮ ಸಮಾಜದ ವೀರ ರಾಣಿ ಕಿತ್ತೂರ ಚೆನ್ನಮ್ಮಾಜಿ ಕಾಲದಿಂದಲೂ ನಮ್ಮ ಸಮಾಜದ ಬಗ್ಗೆ ನಿಮಗೇನು ಬೇಸರ ಮೊದಲು ಹೇಳಿ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅಂದು ಮಲ್ಲಪ್ಪ ಶೆಟ್ಟಿ ಕಪಟ ನಾಟಕವಾಡಿ, ಕಿತ್ತೂರು ಸಾಮ್ರಾಜ್ಯವನ್ನ ಹಾಳು ಮಾಡಿದ್ದರು. ಇಂದು ಮುಖ್ಯಮಂತ್ರಿಗಳ ಕೂಡಿಕೊಂಡು ಪಂಚಮಸಾಲಿ ಸಮಾಜವನ್ನ ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆಂದು ದೂರಿದ್ದಾರೆ.

ಹಲವರು ಹಲವು ರೀತಿಯಲ್ಲಿ ನಾಯಕರಿಬ್ಬರನ್ನ ತರಾಟೆಗೆ ತೆಗೆದುಕೊಂಡಿದ್ದು, ಇವರ ವಿರುದ್ಧ ಹೋರಾಟವನ್ನ ನಡೆಸಲು ಮುಂದಾಗಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಸ್ಥಾನಮಾನ ಕೊಡಲು ಬಾರದಂತೆ ತಡೆಯುವ ಪ್ರಯತ್ನ ನಿಲ್ಲಿಸುವುದಕ್ಕೂ ಕೇಳಿಕೊಂಡಿದ್ದಾರೆ.
ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಬೇರೆಯದ್ದೇ ಸ್ವರೂಪವನ್ನ ಪಡೆದುಕೊಳ್ಳುತ್ತಿರುವುದಂತೂ ಸತ್ಯ…