ಕಲಘಟಗಿ ರಸ್ತೆಯಲ್ಲಿ ಉಪತಹಶೀಲ್ದಾರ ದುರ್ಮರಣ…!

ಮುಂಡಗೋಡ: ನಿಂತ ಲಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಉಪತಹಶೀಲ್ದಾರರೋರವರು ಸಾವಿಗೀಡಾದ ಘಟನೆ ಕಲಘಟಗಿ ರಸ್ತೆಯ ಶಾಂತಿನಗರ ಕ್ರಾಸ್ ಬಳಿ ಸಂಭವಿಸಿದೆ.

ಉಪತಹಶೀಲ್ದಾರ ವಿಜಯಕುಮಾರ ಪದ್ಮನಾಭ ಶೆಟ್ಟಪ್ಪನವರ ಎಂಬುವವರೇ ಸಾವಿಗೀಡಾಗಿದ್ದು, ರಸ್ತೆ ಬದಿಗೆ ಲಾರಿ ನಿಂತಿರುವ ಬಗ್ಗೆ ಇಂಡಿಕೇಟರ್ ಮತ್ತು ಬ್ರೇಕ್ ಲೈಟನ್ನ ಲಾರಿ ಚಾಲಕ ಹಾಕದೇ ಇರುವುದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ.
ಮೂಲತಃ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದವರಾಗಿದ್ದು, ಕೆಲ ವರ್ಷಗಳವರೆಗೂ ಕಲಘಟಗಿ ಪಟ್ಟಣದ ಲಕ್ಷ್ಮೀ ದೇವಸ್ಥಾನದ ಹತ್ತಿರದ ನಿವಾಸಿಗಳಾಗಿದ್ದರು.

ನಿತ್ಯ ಮುಂಡಗೋಡದಿಂದ ಕೆಲಸ ಮುಗಿಸಿಕೊಂಡು ಕಲಘಟಗಿಗೆ ಬರುವ ವೇಳೆಯಲ್ಲಿ ದುರ್ಘಟನೆ ಸಂಭವಿಸಿದೆ. ಉತ್ತಮ ಕೆಲಸಗಾರರಾಗಿದ್ದ ವಿಜಯಕುಮಾರ ಅವರ ಸಾವಿಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ, ತಹಶೀಲ್ದಾರ ಶ್ರೀಧರ ಮುಂದಲಮನಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.