ಕಳ್ಳರು-ಸುಲಿಗೆಕೋರರ ಬಂಧಿಸಿದ ಹುಬ್ಬಳ್ಳಿ ಪೊಲೀಸರು..!
1 min readಹುಬ್ಬಳ್ಳಿ: ಅವಳಿನಗರದಲ್ಲಿ ಸ್ಕೂಟರ್ ಡಿಕ್ಕಿ ತೆಗೆದು ಕಳ್ಳತನ ಮಾಡುತ್ತಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೆನೈ ಮೂಲದ ಬಾಬು ರಾಜು ನಾಯ್ಡು ಹಾಗೂ ಶಂಕರ ಕೊಂಡಲರಾವ ರಾಜು ಎಂಬುವವರನ್ನೇ ಬಂಧಿಸಿರುವ ಪೊಲೀಸರು ಅವರಿಂದ 1.20.000 ಸಾವಿರ ರೂಪಾಯಿ ಮೌಲ್ಯದ ಬೈಕ್ ಹಾಗೂ ಹಲವು ಚಾವಿಗಳನ್ನ ವಶಕ್ಕೆ ಪಡೆಯಲಾಗಿದೆ.
ಡಿಸಿಪಿ ರಾಮರಾಜನ್ ಹಾಗೂ ಡಿಸಿಪಿ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಕೇಶ್ವಾಪುರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸುರೇಶ ಕುಂಬಾರ ನೇತೃತ್ವದಲ್ಲಿ ಸಿಬ್ಬಂದಿಗಳು ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಕಸಬಾಪೇಟೆ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಜನರನ್ನ ಹೊಡೆದು ಸುಲಿಗೆ ಮಾಡುತ್ತಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಹುಬ್ಬಳ್ಳಿ ಗಂಗಾಧರನಗರದ ದರ್ಶನ ಈರಣ್ಣ ಬಿಜವಾಡ ಹಾಗೂ ಸಂದೀಪ ಸುರೇಶ ಬೆಳ್ಳಿಗಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಸಿದುಕೊಂಡು ಪರಾರಿಯಾಗಿದ್ದ 35500 ರೂಪಾಯಿ ಬೆಲೆಯ ಮೊಬೈಲ್, ಬೆಳ್ಳಿ ಚೈನು ಹಾಗೂ ಸುಲಿಗೆ ಮಾಡಿ ಪರಾರಿಯಾಗಲು ಬಳಕೆ ಮಾಡಿದ್ದ ಬೈಕ್ ನ್ನ ವಶಕ್ಕೆ ಪಡೆಯಲಾಗಿದೆ.
ಡಿಸಿಪಿ ರಾಮರಾಜನ್ ಹಾಗೂ ಡಿಸಿಪಿ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಕಸಬಾಪೇಟೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರತನಕುಮಾರ ಜಿರಗ್ಯಾಳ ನೇತೃತ್ವದ ತಂಡ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕಸಬಾಪೇಟೆ ವ್ಯಾಪ್ತಿಯಲ್ಲಿ ಇಬ್ಬರ ಮೇಲೆ ಹಲ್ಲೆ ಮಾಡಿ, ವಸ್ತುಗಳನ್ನ ದೋಚಿಕೊಂಡು ಪರಾರಿಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸಿದ್ದರು.