ಶ್ವೇತಾ ಲವ್ಸ್ ಸಂತೋಷ: ಮೂರೇ ವರ್ಷದಲ್ಲಿ ನೇಣಿಗೆ ಶರಣಾದಳು..!
ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವಕನನ್ನೇ ಮನೆಯರೊಂದಿಗೆ ಹಠಕ್ಕೆ ಬಿದ್ದು ಮದುವೆಯಾಗಿದ್ದ ಮಹಿಳೆಯೋರ್ವಳು ಇಂದು ನೇಣಿಗೆ ಶರಣಾಗುವ ಮೂಲಕ ತನ್ನ ಜೀವನವನ್ನ ಕೊನೆಗಾಣಿಸಿಕೊಂಡಿದ್ದಾಳೆ.
ಹುಬ್ಬಳ್ಳಿಯ ದೇಸಾಯಿ ಓಣಿಯ ನಿವಾಸಿಯಾಗಿದ್ದ ಶ್ವೇತಾ ಬೆಣಗಿ ಎಂಬ 24 ವಯಸ್ಸಿನ ಮಹಿಳೆ, ತನ್ನ ಒಂದು ವರ್ಷದ ಹೆಣ್ಣು ಮಗುವನ್ನ ತಬ್ಬಲಿ ಮಾಡಿ, ಮನೆಯಲ್ಲಿಯೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳೆದ ಮೂರು ವರ್ಷದ ಹಿಂದೆ ಶ್ವೇತಾ, ಸಂತೋಷ ಎಂಬುವವರನ್ನ ಇಷ್ಟಪಟ್ಟು ಮದುವೆಯಾಗಿದ್ದಳು. ಮೊದ ಮೊದಲು ಎಲ್ಲವೂ ಚೆನ್ನಾಗಿತ್ತಾದರೂ, ಬರ ಬರುತ್ತ ಪ್ರೇಮಿಗಳು ತಮ್ಮತನವನ್ನ ಕಳೆದುಕೊಂಡರು ಎಂದು ಹೇಳಲಾಗಿದೆ.
ಮನೆಯಲ್ಲಿ ಮಾನಸಿಕವಾಗಿ ನೊಂದ ಶ್ವೇತಾ, ಇಂದು ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದನ್ನ ನೋಡಿದ ಮನೆಯವರು ತಕ್ಷಣವೇ ಆಕೆಯನ್ನ ಕಿಮ್ಸಗೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಿಮ್ಸನಲ್ಲಿ ಶ್ವೇತಾ ಸಾವಿಗೀಡಾಗಿದ್ದಾಳೆ.
ಘಟನೆಯ ಬಗ್ಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.