ಧಾರವಾಡ ಜಿಪಂ ಇನ್ನೂ ಮುಂದೆ 27 ಸೀಟು, ಚುನಾವಣೆ ಆಯೋಗದ ಆದೇಶ..!
ಬೆಂಗಳೂರು: ಜನಸಂಖ್ಯೆಯ ಅನುಗುಣವಾಗಿ ಜಿಲ್ಲಾವಾರು ಕ್ಷೇತ್ರಗಳ ವಿಗಂಡಣೆಯಾಗಿದ್ದು, ಧಾರವಾಡ ಜಿಲ್ಲೆಯಲ್ಲಿ 5 ಕ್ಷೇತ್ರಗಳು ಹೆಚ್ಚಾಗಲಿದ್ದು, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಹೆಚ್ಚಾಗಲಿವೆ.
ಗ್ರಾಮೀಣ ಪ್ರದೇಶದ ಜನಸಂಖ್ಯೆ ವಿವರವನ್ನ ಪಡೆದಿರುವ ರಾಜ್ಯ ಚುನಾವಣಾ ಆಯೋಜ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನ ಕಳಿಸಿದ್ದು, ಇದರಲ್ಲಿ ಕ್ಷೇತ್ರವಾರು ವಿಗಂಡನೆ ಮಾಡಿ, ವಿವರವಾದ ಮಾಹಿತಿಯನ್ನ ರವಾನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಒಟ್ಟು 27 ಕ್ಷೇತ್ರಗಳು ಆಗಲಿವೆ. ಧಾರವಾಡ-07, ಹುಬ್ಬಳ್ಳಿ-05, ನವಲಗುಂದ-5, ಕಲಘಟಗಿ-04, ಕುಂದಗೋಳ-05, ಅಳ್ನಾವರ-01 ಹಾಗೂ ಅಣ್ಣಿಗೇರಿ-02 ಜಿಲ್ಲಾ ಪಂಚಾಯತಿ ಕ್ಷೇತ್ರಗಳಾಗಲಿವೆ.
ಇದಕ್ಕೆ ಸಂಬಂಧಿಸಿದಂತೆ ನಕ್ಷೆಯನ್ನ ರೂಪಿಸಿ ಕೊಡುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ತಾಲೂಕು ಪಂಚಾಯತಿ ಕ್ಷೇತ್ರಗಳಲ್ಲಿಯೂ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಒಟ್ಟು 87 ತಾಲೂಕು ಪಂಚಾಯತಿ ಕ್ಷೇತ್ರಗಳಾಗಲಿವೆ.