ಶಾಸಕ ಅರವಿಂದ ಬೆಲ್ಲದ್ ಅವರ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿರುವುದೇನು…!
ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಮತ್ತು ಭಾರತೀಯ ಜನತಾ ಪಕ್ಷದ ಸ್ಥಳೀಯ ಪ್ರಮುಖರು ಫುಲ್ ಜಾಲಿ ಮೂಡಲಿದ್ದಾರೆ. ಅದೇ ಕಾರಣಕ್ಕೆ ಇಟಿಗಟ್ಟಿ ಬಳಿಯ ಫಾರ್ಮ್ ಹೌಸನಲ್ಲಿ ಏನು ಮಾಡುತ್ತಿದ್ದಾರೆ.. ಪೂರ್ಣವಾಗಿ ನೋಡಿ..
ಇಲ್ಲಿದೆ ವೀಡಿಯೋ..
ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರೂ ಆಗಿದ್ದರಿಂದ ಆ ಭಾಗದ ಪ್ರಮುಖರನ್ನ ಕರೆದುಕೊಂಡು ದೇಶಿ ಆಟಗಳನ್ನಾಡುತ್ತ ಇಟಿಗಟ್ಟಿಯ ಬಳಿಯ ಅವರದ್ದೇ ಫಾರ್ಮ್ ಹೌಸನಲ್ಲಿ ಸಮಯ ಕಳೆಯುತ್ತಿದ್ದಾರೆ.
ಭಾರತೀಯ ಜನತಾ ಪಕ್ಷದ ಸೆಂಟ್ರಲ್ ಕ್ಷೇತ್ರದ ಮಾಜಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ, ಶಂಕರ ಶೇಳಕೆ ಸೇರಿದಂತೆ ಹಲವರು ದೇಸಿ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಮಹಾಭಾರತದಲ್ಲಿ ಬರುವ ಪ್ರಮುಖರ ಹೆಸರುಗಳನ್ನ ಹೇಳುವಾಟದಲ್ಲಿ ಎದುರಾಳಿ ಗುಂಪೊಂದು ರಾಮಾಯಣದ ಸೀತೆ ಹೆಸರು ಹೇಳಿ, ನಗೆಬುಗ್ಗೆಯಾದ ಘಟನೆಯೂ ನಡೆದಿದೆ.