ಪೊಲೀಸ್ ಇಲಾಖೆಯಲ್ಲಿದ್ದರೂ ಸಾಹಿತಿಯಾದ “ಹಂಶ ಕವಿ”….!
1 min readಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಬೀದರ್ ನ ಹನುಮಂತಪ್ಪ ವಲ್ಲೇಪುರೆ (ಹಂಶ ಕವಿ) ರಚಿತ ಕೃತಿಯನ್ನ ಮಾಜಿ ಸಂಸದ ಹಾಗೂ ವಿಆರ್ ಆಲ್ ಸಮೂಹ ಸಂಸ್ಥೆಗಳ ಚೇರಮನ್ ರಾದ ವಿಜಯ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು.
ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಹನುಮಂತಪ್ಪ ವಲ್ಲೇಪುರೆಯವರ ಶ್ರೀದತ್ತ ಭಾಗವತ ಎಂಬ ಕೃತಿಯನ್ನ ಬಿಡುಗಡೆ ಮಾಡಲಾಯಿತು. ಹನುಮಂತಪ್ಪ ವಲ್ಲೇಪುರೆ ಅವರು ರಚಿಸಿರುವ 108 ನೇ ಕೃತಿ ಶ್ರೀದತ್ತ ಭಾಗವತವಾಗಿದ್ದು, 120 ಕ್ಕೂ ಹೆಚ್ಚು ಕೃತಿಯನ್ನ ರಚಿಸಿದ್ದಾರೆ. ಭಗವಾನ್ ದತ್ತಾತ್ರೇಯ ಮಹಾಪುರಾಣ ಸತ್ಯ ಕತೆಯ ಕುರಿತು ರಚಿಸಿರುವ ಕೃತಿ ಇದಾಗಿದ್ದು, ಮೂಲ ದತ್ತಾತ್ರೇಯ ಕೃತಾಯುಗದಿಂದ ಸತ್ಯಯುಗದ ಆರಂಭದವೆರೆಗೆ ದತ್ತಾತ್ರೇಯನ ಅವತಾರಗಳ ಕುರಿತು ನಮೂದಿಸಲಾಗಿದೆ.
ಮೂಲ ದತ್ತಾತ್ರೇಯ ಶಿಷ್ಯನ ನವನಾತನ ಕಥೆಯನ್ನ ಶ್ರೀದತ್ತ ಭಾಗವತ ಒಳಗೊಂಡಿದ್ದು, ಕಥೆ ಉಪಕಥೆಗಳು ಸೇರಿ 168 ಅಧ್ಯಾಯಗಳನ್ನೊಳಗೊಂಡ ಪುರಾಣ ಕೃತಿಯಿದ್ದಾಗಿದೆ. ಜಗತ್ತಿನ 52 ಭಾಷೆಗಳಲ್ಲಿ ಕೃತಿ ಅನುವಾದಿಸುವ ಸಂಕಲ್ಪ ಹೊಂದಿರುವ ಹನುಮಂತಪ್ಪ ವಲ್ಲೇಪುರೆ ಅವರು, ಈಗಾಗಲೇ ಮರಾಠಿ, ತೆಲುಗು, ಇಂಗ್ಲಿಷ್, ಹಿಂದಿ, ನೇಪಾಳಿ, ಉರ್ದು, ತಮಿಳು, ಗುಜರಾತಿ ಭಾಷೆಗಳಲ್ಲಿ ಅನುವಾದ ಕಾರ್ಯ ನಡೆದಿದೆ.
ಬೀದರ್ ನ ಖ್ಯಾತ ಉದ್ಯಮಿ ಮಹೇಶ ಸ್ವಾಮಿ, ಧಾರವಾಡ ಸಾಹಿತಿ ಆರ್.ಬಿ.ಚಿಲುಮೆ, ಪೊಲೀಸ್ ಸಾಹಿತಿ ಸೋಮುರೆಡ್ಡಿ, ಬೀದರ್ ನ ಉದ್ಯಮಿ ಗುರುಸಿದ್ಧಪ್ಪ ಬಿರಾದಾರ, ನ್ಯಾಯವಾದಿ ಶೇಷಾದ್ರಿ ಜಯಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆರ್.ಬಿ.ಚಿಲುಮೆಯವರ ಸರ್ವಜ್ಞ ಕವಿ ಚರಿತಾಮೃತ, ಡಾ ಪುಟ್ಟರಾಜ ಗವಾಯಿಗಳ ಚರಿತಾಮೃತ ಮತ್ತು ವಚನ ವೈಭವ ಕೃತಿಗಳ ಬಿಡುಗಡೆಯನ್ನ ಮಾಡಲಾಯಿತು.