ಮೂರುಸಾವಿರ ಮಠದ ಬಗ್ಗೆ ಹಾದಿ ಬೀದಿಯೊಳಗೆ ಮಾತಾಡ್ತಿದ್ದಾರೆ: ನಾಗರಾಜ ಛಬ್ಬಿ
ಹುಬ್ಬಳ್ಳಿ: ಮೂರುಸಾವಿರ ಮಠದ ಆಸ್ತಿಯನ್ನ ಯಾವ ಉದ್ದೇಶಕ್ಕಾಗಿ ಕೊಡಲಾಗಿದೆ ಎಂಬುದನ್ನ ಯಾರೋಬ್ಬರು ಹೇಳುತ್ತಿಲ್ಲ. ಹೀಗಾಗಿ ಮಠದ ಬಗ್ಗೆ ಹಾದಿ ಬೀದಿಯಲ್ಲಿ ನಿಂತು ಮಾತನಾಡುವ ಹಾಗಾಗಿದೆ. ಇದಕ್ಕೊಂದು ತಾರ್ಕಿಕ ಅಂತ್ಯವನ್ನ ನೀಡಲು ಶ್ರೀ ಮೂರುಸಾವಿರ ಮಠದ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಮುಂದಾಗಬೇಕೆಂದು ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ, ಬೇಸರದಿಂದ ಹೇಳಿದರು.
ನಾಗರಾಜ ಛಬ್ಬಿಯವರು ಹೇಳಿದ್ದೇನು.. ಇಲ್ಲಿದೆ ನೋಡಿ ವೀಡಿಯೋ..
ಹುಬ್ಬಳ್ಳಿಯಲ್ಲಿ ಮಾತನಾಡಿದ ನಾಗರಾ ಛಬ್ಬಿಯವರು, ಮೂರುಸಾವಿರ ಮಠದ ಉನ್ನತ ಮಟ್ಟದ ಸಮಿತಿ ಪರಿಪೂರ್ಣವಾಗಿದ್ದಲ್ಲ. ಲಕ್ಷಾಂತರ ಭಕ್ತರು ಅಲ್ಲಿ ನಡೆದುಕೊಳ್ಳುತ್ತಿದ್ದಾರೆ. ಅಳಿದುಳಿದ ಆಸ್ತಿಯನ್ನ ಕೊಡುವುದರ ಹಿನ್ನೆಲೆಯಲ್ಲಿ ಯಾಕೆ ಹೇಳುತ್ತಿಲ್ಲವೆಂದರು.
ಉನ್ನತಮಟ್ಟದ ಸಮಿತಿಯವರ ಜವಾಬ್ದಾರಿಯಿತ್ತು. ಆದರೆ, ಅವರು ಹೇಳೋಕೆ ತಯಾರಿಲ್ಲ. ಎಲ್ಲರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಆಸ್ತಿ ಕೊಡುವುದರಿಂದ ಮಠಕ್ಕೆ ಒಳ್ಳೆಯದಾಗತ್ತಾ..? ಆಗಿದ್ರೇ ಹೇಳಿ.. ಎಂದು ಒತ್ತಾಯಿಸಿದರು.
ಸಮಾಜದ ಮುಂದೆ ಸತ್ಯವನ್ನ ಹೇಳಿ. ಏನಾಗಿದೆ ಹಣ ಪಡೆದಿದ್ದೀರಾ..? ಇಡೀ ಪ್ರಕರಣವನ್ನ ಸಮಾಜದ ಮುಂದೆ ಹೇಳುವ ಪ್ರಯತ್ನವನ್ನ ಸ್ವಾಮೀಜಿಯವರು ಮಾಡಬೇಕೆಂದು ನಾಗರಾಜ ಛಬ್ಬಿ ಕೋರಿದರು.