ಮುಕ್ಕಲ್ ಗ್ರಾಮ ಪಂಚಾಯತಿ “ಕೈ’ಪಾಲು: ನಿಂಗರೆಡ್ಡಿ ಅಧ್ಯಕ್ಷ, ಶ್ರೀಕಾಂತಗೌಡ ಪಾಟೀಲ ಉಪಾಧ್ಯಕ್ಷ..!
1 min readಧಾರವಾಡ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗುತ್ತಿದ್ದ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಗ್ರಾಮದ ಇತಿಹಾಸದಲ್ಲೇ ಮೊದಲ ಬಾರಿಗೆ ಅವಿರೋಧ ಆಯ್ಕೆಯಾಗಿದ್ದು, ಇದಕ್ಕೇಲ್ಲ ಕಾಂಗ್ರೆಸ್ ಮುಖಂಡ ರಾಮನಗೌಡ ಪಾಟೀಲರ ನೇತೃತ್ವವೇ ಕಾರಣವಾಗಿದೆ.
ಮುಕ್ಕಲ ಗ್ರಾಮ ಪಂಚಾಯತಿ ಸದಾಕಾಲ ವಿವಾದದ ಗೂಡಾಗುತ್ತಿತ್ತು. ಮೊದಲ ಬಾರಿಗೆ ಇಂತಹ ಚುನಾವಣೆ ಪ್ರಕ್ರಿಯೆ ನಡೆದಿರುವುದು ತಾಲೂಕಿನ ರಾಜಕೀಯ ಪಂಡಿತರನ್ನ ಹುಬ್ಬೇರಿಸುವಂತೆ ಮಾಡಿದೆ.
ಗ್ರಾಮದ 10ಕ್ಕೆ 10 ಸೀಟುಗಳನ್ನ ಗೆಲ್ಲಿಸಿಕೊಳ್ಳುವಲ್ಲಿ ಮುಕ್ಕಲ ಗ್ರಾಮದ ಜನರು ಮಾಡಿದ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದು ಕಾಂಗ್ರೆಸ್ ಮುಖಂಡ ರಾಮನಗೌಡ ಪಾಟೀಲ. ಹೀಗಾಗಿ ಈ ಬಾರಿ ಯಾವುದೇ ಅಡೆತಡೆಗಳಿಲ್ಲದೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ.
ಮುಕ್ಕಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನಿಂಗರೆಡ್ಡಿ ನಡುವಿನಮನಿ, ಉಪಾಧ್ಯಕ್ಷರಾಗಿ ಶ್ರೀಕಾಂತಗೌಡ ಪಾಟೀಲ ಅವರುಗಳನ್ನ ಗ್ರಾಮದ ಹಿರಿಯರ ಸಮ್ಮುಖದಲ್ಲೇ ಆಯ್ಕೆ ಮಾಡಿ, ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ಮಾಡುವಂತೆ ರಾಮನಗೌಡ ಪಾಟೀಲ, ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಕರೆ ನೀಡಿದರು.