ವರೂರು ಪಂಚಾಯತಿಗೆ ಹೆಂಡತಿ ಅಧ್ಯಕ್ಷ- ಗಂಡ ಉಪಾಧ್ಯಕ್ಷ…!
1 min readಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮ ಪಂಚಾಯತಿಗೆ ಇನ್ನೂ ಮುಂದೆ ಮಡದಿ ಅಧ್ಯಕ್ಷೆಯಾಗಿಯೂ ಪತಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೊಸದೊಂದು ಇತಿಹಾಸ ಬರೆಯಲಾಗಿದೆ.
ಗ್ರಾಮದ ಅಭಿವೃದ್ಧಿಯನ್ನ ದೃಷ್ಟಿಯಲ್ಲಿಟ್ಟುಕೊಂಡು ನಡೆದ ಆಯ್ಕೆಯಲ್ಲಿ ವಿಶಾಲಾಕ್ಷಿ ಚೆನ್ನಬಸನಗೌಡ ಹನಮಂತಗೌಡ್ರ ಅಧ್ಯಕ್ಷೆಯಾಗಿಯೂ, ಇವರ ಪತಿ ಚೆನ್ನಬಸಬನಗೌಡ ಹನಮಂತಗೌಡ್ರ ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ದಂಪತಿಗಳನ್ನ ಆಯ್ಕೆ ಮಾಡಲು ವರೂರು ಹಾಗೂ ಕಂಪ್ಲಿಕೊಪ್ಪ ಗ್ರಾಮದ ಪ್ರತಿಯೊಬ್ಬರು ಶ್ರಮಿಸಿದ್ದು, ಯಾವುದೇ ರೀತಿಯ ತೊಂದರೆಗಳಿಲ್ಲದೇ ಹಾಗೇ ಆಯ್ಕೆ ನಡೆದಿದೆ.
ರಾಜ್ಯದಲ್ಲಿ ಈ ಬಾರಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯ ನಂತರ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನಡೆಯುತ್ತಿದ್ದು, ಈ ಥರವಾಗಿ ಎಲ್ಲಿಯೂ ಆಯ್ಕೆ ನಡೆದಿಲ್ಲ.
ಗ್ರಾಮ ಪಂಚಾಯತಿಯಲ್ಲಿ ನಡೆಯುವ ಯಾವುದೇ ರೀತಿಯ ಚಟುವಟಿಕೆಗಳು ಇಲ್ಲಿ ನಡೆದಿಲ್ಲ. ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ ದಂಪತಿಗಳನ್ನ ಆಯ್ಕೆ ಮಾಡಿದ್ದು, ಗ್ರಾಮದ ಅಭಿವೃದ್ಧಿ ಯಾವ ರೀತಿಯಲ್ಲಿ ಆಗುತ್ತದೆ ಎಂಬುದನ್ನ ಕಾದು ನೋಡಬೇಕಿದೆ.