ನಕಲಿ ಅಂಕಪಟ್ಟಿ- ಇಬ್ಬರು ವಶಕ್ಕೆ ಮತ್ತೊಬ್ಬ ನಾಪತ್ತೆ

ಹಾವೇರಿ: ಆಡಿಟ್ ಆಗದ ವಿದ್ಯಾಸಂಸ್ಥೆಯ ಹೆಸರಿನಲ್ಲಿ ಪತ್ರ ವ್ಯವಹಾರ ಮಾಡುವುದಲ್ಲದೇ ನಕಲಿ ಅಂಕಪಟ್ಟಿಯನ್ನು ನೀಡಿ ಸರಕಾರಕ್ಕೆ ಮೋಸ ಮಾಡಿರುವ ಘಟನೆ ವರದಿಯಾಗಿದೆ. ಹಾವೇರಿ ನಿವಾಸಿ ಕೆ. ಮಂಜಪ್ಪ ನೀಡಿದ ದೂರಿನ ಹಿನ್ನಲೆಯಲ್ಲಿ ಕೇಂದ್ರ ಅಪರಾಧ ವಿಭಾಗ ಆರೋಪಿಗಳನ್ನು ಬಂದಿಸಿದ್ದಾರೆ.
ಸಾಗರದ ಟಿ. ದುರ್ಗಾನಾಯ್ಕ ಹಾಗೂ ಹಿರೇಕೆರೂರಿನ ಸತೀಶ ಪಟ್ಟಣಶೆಟ್ಟಿಯನ್ನು ಬಂಧಿಸಿರುವ ಪೊಲೀಸರು ಬೀಳಗಿಯ ಗಣೇಶ ನಾಯ್ಕನ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.