ದುನಿಯಾ ವಿಜಯೀಗ ‘ಸಲಗ’

ಹಲವು ವಿವಾದಗಳನ್ನು ಮೆಟ್ಟಿನಿಂತು ತನ್ನದೇ ಶಕ್ತಿಯ ಮೂಲಕ ಜನರ ಬಳಿಗೆ ಬರಲು ದುನಿಯಾ ವಿಜಿ ರೆಡಿಯಾಗಿದ್ದಾರೆ. ಸ್ವಂತ ನಿರ್ದೇಶನದಲ್ಲಿ ರೆಡಿಯಾಗಿರುವ ಸಲಗ ಇನ್ನೇನು ರಾಜ್ಯಾದ್ಯಂತ ತೆರೆಗೆ ಬರಲು ಎಲ್ಲ ರೀತಿಯ ತಯಾರಿಯನ್ನು ವಿಜಿ ಮಾಡಿಕೊಂಡಿದ್ದಾರೆ.
ಕುಟುಂಬದ ಅನೇಕ ರಗಳೆಗಳ ನಡುವೆಯೂ ತಮ್ಮ ಚಿತ್ರ ಪ್ರೇಮವನ್ನು ಬಿಡದ ಕರಿಚಿರತೆ. ಸಲಗವಾಗಿ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಪ್ರಮೋಷನ್ ಸಾಂಗ್ ಸಾಕಷ್ಟು ಸದ್ದು ಮಾಡಿದ್ದು. ದುನಿಯಾ ವಿಜಿ ನಿರ್ದೇಶಕನಾಗಿಯೂ ಸಕ್ಸಸ್ ಗಳಿಸಲಿದ್ದಾರೆಂಬ ಭಾವನೆಯಲ್ಲಿ ಅಭಿಮಾನಿಗಳು ಸಲಗಕ್ಕಾಗಿ ಕಾಯುತ್ತಿದ್ದಾರೆ.