ರೈತರನ್ನ ರೌಡಿ ಮಾಡಿದ ಪೊಲೀಸರು: ಮಹದಾಯಿ ಹೋರಾಟಗಾರರಿಗೂ ರೌಡಿ ಪರೇಡ್ : Karnataka Voice EXCLUSIVE

ಧಾರವಾಡ: ಕಳೆದ 17 ರಂದು ಜಿಲ್ಲಾ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಕಳಸಾ-ಬಂಡೂರಿ ಹೋರಾಟಗಾರರನ್ನ ರೌಡಿ ಪರೇಡ್ ಮಾಡಿಸಿ ಜಿಲ್ಲಾ ವರಿಷ್ಠಾಧಿಕಾರಿ ಪೇಚಿಗೆ ಸಿಲುಕಿದ್ದಾರೆ.
ಬಂಡಾಯದ ಇತಿಹಾಸ ಹೊಂದಿದ ನವಲಗುಂದ ಪಟ್ಟಣದ ರಮೇಶ ಹಲಗತ್ತಿ ಹಾಗೂ ದೇವೆಂದ್ರಪ್ಪ ಹಳ್ಳದ ಎಂಬಿಬ್ಬರು ರೈತರನ್ನ ರೌಡಿ ಷೀಟರ್ ಮಾಡಲಾಗಿದೆ. ರೈತರನ್ನ ರೌಡಿಗಳನ್ನಾಗಿ ಮಾಡಿದ್ದು ಸಮ್ಮಿಶ್ರ ಸರಕಾರದ ಅವಧಿಯಲ್ಲಿ. ಹೀಗಾಗಿಯೇ ಇಬ್ಬರನ್ನೂ ಕರೆದುಕೊಂಡು ಬಂದು ಇನ್ನುಳಿದ ರೌಡಿ-ವಂಚಕರ ನಡುವೆ ನಿಲ್ಲಿಸಿ ಪರೇಡ್ ಮಾಡಲಾಗಿದೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.