ಡಿಸಿ ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಸಾವು:Exclusive

ಧಾರವಾಡ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀವ್ರ ಬಳಲಿದ ಸಾರಿಗೆ ಅಧಿಕಾರಿ ಹೃದಯಾಘಾತದದಿಂದ ಸಾವಿಗೀಡಾದ ಘಟನೆ ಮಂಗಳವಾರ ಇಳಿಸಂಜೆ ನಡೆದಿದೆ.
ಟ್ಯಾಕ್ಸ್ ಆ್ಯಂಡ್ ಟಸರಿ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಚಂದ್ರಶೇಖರ ಕವಳಿ ಸಾವಿಗೀಡಾದ್ದಾರೆ. ಸುಮಾರು ನಾಲ್ಕು ಗಂಟೆಯ ವೇಳೆಯಲ್ಲಿ ಸಭೆ ನಡೆಯುತ್ತಿದ್ದಾಗಲೇ ಬಳಲಿದ ಚಂದ್ರಶೇಖರ ಅವರನ್ನ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿದೆ. ಅಷ್ಟರಲ್ಲಿ ಕವಳಿ ಮೃತಪಟ್ಟಿದ್ದಾರೆ.
ಚಂದ್ರಶೇಖರ ಕವಳಿಯವರಿಗೆ ಬಹಳ ದಿನಗಳ ಹಿಂದೆ ಬೈಪಾಸ್ ಸರ್ಜರಿಯಾಗಿತ್ತು ಎನ್ನಲಾಗಿದೆ.