ಕೆಎಸ್ಸಾರ್ಟಿಸಿ ನೌಕರರ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಬ್ಯಾಟಿಂಗ್

ಬೆಂಗಳೂರು: ಕೆಎಸ್ಆರ್ ಟಿಸಿ ನೌಕರರ ಪರ ಸಿಎಂಗೆ ಮಾಜಿ ಸಿಎಂ ಕುಮಾರಸ್ವಾಮಿ ಪತ್ರ.
ಕೆಎಸ್ ಆರ್ ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಹಾಲಿ ಸಿಎಂ ಯಡಿಯೂರಪ್ಪನವರಿಗೆ ಎಚ್ಡಿಕೆ ಮನವಿ ಮಾಡಿಕೊಂಡಿದ್ದಾರೆ.
ಕೆಎಸ್ಆರ್ಟಿಸಿ ನೌಕರರು ಮತ್ತು ಇತರೆ ಸರ್ಕಾರಿ ನೌಕರರ ವೇತನ ಭತ್ಯೆಗೂ ಅಜಗಜಾಂತರ ವ್ಯತ್ಯಾಸ ಇದೆ. ನಾನು ಸಿಎಂ ಆಗಿದ್ದಾಗ ಅಧಿಕಾರಿ ಗಳೊಂದಿಗೆ ಚರ್ಚೆ ಮಾಡಿದ್ದೆ. ಜೊತೆಗೆ ಪಕ್ಷದ ಪ್ರಣಾಳಿಕೆ ಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಕೆಎಸ್ಆರ್ಟಿಸಿ ನೌಕರರನ್ನು ಪೂರ್ಣ ಪ್ರಮಾಣದ ನೌಕರರಾಗಿಸಲು ಸಿದ್ದತೆ ಮಾಡಿಕೊಂಡಿದ್ದೆ. ಅಷ್ಟರಲ್ಲಿ ನೀವು ಸಿಎಂ ಅಗಿದ್ದೀರಿ.
ಈಗ ಬಜೆಟ್ ಮಂಡಿಸುತ್ತಿರುವ ನೀವು ಈ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ. ಸೂಕ್ತ ವೇತನ ಮತ್ತು ಸವಲತ್ತು ನೀಡಿ ಎಂದು ಸಿಎಂ ಗೆ ಎಚ್ಡಿಕೆ ಕೋರಿದ್ದಾರೆ. ಇದರಿಂದ ಹೋರಾಟ ನಡೆಸುತ್ತಿದ್ದ ನೌಕರರಿಗೆ ಆನೆ ಬಲ ಬಂದಂತಾಗಿದೆ.