ರಾಣೆಬೆನ್ನೂರಿನಲ್ಲಿ ಗೋದಾಮಿಗೆ ಬೆಂಕಿ: ಲಕ್ಷಾಂತರ ವಸ್ತು ಕರಕಲು

ರಾಣೆಬೆನ್ನೂರು: ವಿದ್ಯುತ್ ಅವಘಡದಿಂದ ಆಟೋಮೊಬೈಲ್ ಗೋದಾಮಿಗೆ ಬೆಂಕಿ ತಗುಲಿದ ಘಟನೆ ಹಾವೇರಿ ಜಿಲ್ಲೆಯ ರಾಣಿಬೇನ್ನೂರಿನ ಮೃತ್ಯುಂಜಯ ನಗರದ ಸಂಭವಿಸಿದೆ.
ನಗರದ ಪೂಜಾ ಆಟೋಮೊಬೈಲ್ ಗೆ ಅಂಗಡಿಗೆ ಬೆಂಕಿ ತಗುಲಿದ್ದು, ಗೋದಾಮಿನಲ್ಲಿದ್ದ ವಾಹನಗಳ ಬಿಡಿಭಾಗಗಳು ಬೆಂಕಿಗಾಹುತಿಯಾಗಿವೆ.
ಸುಮಾರು ಹತ್ತು ಲಕ್ಷ ಮೌಲ್ಯದಲ್ಲಿ ಮೋಟಾರು ವಾಹನ ಬಿಡಿಭಾಗಗಳು ನಾಶವಾಗಿದ್ದು, ಬೆಂಕಿ ಹೆಚ್ಚಾದ ಪರಿಣಾಮ ಕಟ್ಟಡದ ತುಂಬಾ ತುಂಬಿಕೊಂಡಿದೆ ದಟ್ಟ ಹೊಗೆ.
ಪ್ಲಾಸ್ಟಿಕ್ ಮತ್ತು ಟೈಯರ್‌ಗಳಿಗೆ ಬೆಂಕಿ ತಗುಲಿ ಹೆಚ್ಚಾಗಿರುವ ಹೊಗೆ. ಬೆಂಕಿ ನಂದಿಸಲು ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಯಿಂದ ಅವಿರತ ಪ್ರಯತ್ನ.