ಅಣ್ಣನ ಉಳಿಸಲು ಹೋಗಿ ತಮ್ಮನೂ ನೀರು ಪಾಲು: ಸಹೋದರರಿಗಾಗಿ ಹುಡುಕಾಟ

ದಾವಣಗೆರೆ: ನೀರು ಕುಡಿಯಲು ಹೋಗಿ ಕಾಲು ಜಾರಿ ಭದ್ರಾ ನಾಲೆಗೆ ಬಿದ್ದು ಸಹೋದರರು ನೀರು ಪಾಲಾದ ಘಟನೆ ನಡೆದಿದೆ.
ನೀರಿಗೆ ಬಿದ್ದ ಅಣ್ಣನನ್ನ ರಕ್ಷಿಸಲು ಹೋಗಿ ತಮ್ಮ ಸಹ ನೀರುಪಾಲಾಗಿದ್ದಾನೆ. ಕೃಷ್ಣಮೂರ್ತಿ (21) ಬೀರಲಿಂಗೇಶ್ (19) ನೀರು ಪಾಲಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದ ಬಳಿಯ ಭದ್ರಾ ನಾಲೆಯಲ್ಲಿ ಘಟನೆ ನಡೆದಿದೆ. ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮದ ನಿವಾಸಿಗಳಾದ ಕೃಷ್ಣಮೂರ್ತಿ ಹಾಗೂ ಬೀರಲಿಂಗೇಶರ ಹುಡುಕಾಟ ನಡೆದಿದ್ದು, ಸ್ಥಳಕ್ಕೆ ಸಂತೆಬೆನ್ನೂರ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.