ದಿಂಗಾಲೇಶ್ವರ ಶ್ರೀ ಜೊತೆ ಬಾಬಾ ರಾಮದೇವ್ ಭೇಟಿ: ಅಲ್ಲಿ ನಡೆದಿದ್ದಾದರೂ ಏನು….!

ಹುಬ್ಬಳ್ಳಿ: ಪ್ರತಿಷ್ಠಿತ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಶ್ರೀಗಳು ಬಾಬಾ ರಾಮದೇವ್ ಜೊತೆ ಬರೋಬ್ಬರಿ ಒಂದು ಗಂಟೆಗಳ ಕಾಲಕ್ಕೂ ಹೆಚ್ಚು ಸಮಯ ಮಾತನಾಡಿದ್ದಾರೆ. ಅವರಿಬ್ಬರ ನಡುವೆ ಅದೇನು ಮಾತುಕತೆ ನಡಿಯಿತು ಗೊತ್ತಾ..
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ಬಾಬಾ ರಾಮದೇವ್ ಜೊತೆ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಉಭಯ ಕುಶಲೋಪರಿ ನಡೆಸಿದರು.
ಧಾರ್ಮಿಕ ಮನೋಭಾವನೆ ಜೊತೆಗೆ ಜನರ ಐಕ್ಯತೆಗೆ ಬೇಕಾದ ವಿಷಯಗಳ ಕುರಿತು ಇಬ್ಬರು ಮಾತನಾಡಿದ್ದಾರೆ. ಅವರಿಬ್ಬರ ಆತ್ಮೀಯತೆ ಭಕ್ತಗಣದಲ್ಲಿ ಹರ್ಷ ಮೂಡಿಸಿದೆ.