ಬಿಜೆಪಿ ಕಚೇರಿಯಲ್ಲಿ ಕಸ ಹೊಡೆಯುತ್ತೇನೆ: ಪಕ್ಷಾಂತರಿ ಶಾಸಕ ಕುಮಟಳ್ಳಿ ಅವಸ್ಥೆ

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರನ್ನ ನಂಬಿ ಬಂದಿದ್ದೇವೆ. ಮಂತ್ರಿ ಮಾಡ್ತೇವಿ ಅಂದಿದ್ರು. ಅವರು ಹಾಗೇ ಮಾಡದೇ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸು ಅಂದ್ರೂ ಅದ್ಕೆ ತಯಾರ್ ಇದ್ದೇನೆ ಎಂದು ಪಕ್ಷಾಂತರಿ ಶಾಸಕ ಮಹೇಶ ಕುಮಟಳ್ಳಿ ಹೇಳಿದ್ರು.
ಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ಅಸಮಾಧಾನ ಹೊರ ಹಾಕಿರುವ ಕುಮಟಳ್ಳಿ, ತಮ್ಮ ಕ್ಷೇತ್ರಕ್ಕೆ ಹೋಗದೇ ಪಕ್ಷದ ಹೆಡ್ಡಾಫೀಸ್‌ಲ್ಲಿ ಕಸ ಹೊಡೆಯಲು ಸಿದ್ಧ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಯಿಂದ ಗೆದ್ದು ಸಚಿವರಾಗುವ ಕನಸು ಕಂಡಿದ್ದ ಮಹೇಶ ಕುಮಟಳ್ಳಿ ಅವರಿಗೆ ಇದೀಗ ಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ರೋಸಿ ಹೋಗಿದ್ದಾರೆ.