ಹುಬ್ಬಳ್ಳಿಯಲ್ಲೂ ಕರೋನಾ ವೈರಸ್ ಹರಡುವ ಆತಂಕ

ಹುಬ್ಬಳ್ಳಿ: ಕರೋನಾ ವೈರಸ್ ಹರಡುವ ಆತಂಕ ಎದುರಾಗಿದ್ದು, ಕಿಮ್ಸ್ ಆಸ್ಪತ್ರೆಗೆ ಕರೋನಾ ಸೋಂಕಿತ ವಾರ್ಡ್ ಗೆ ವ್ಯಕ್ತಿ ದಾಖಲಾದ ಘಟನೆ ನಡೆದಿದೆ.
ಚೀನಾದಿಂದ ಮರಳಿದ ಸಂದೀಪ್ ಎಂಬಾತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕರೋನಾ ವೈರಸ್ ಲಕ್ಷಣಗಳು ಪತ್ತೆಯಾದ ಹಿನ್ನಲೆ ಸಂದೀಪ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಂದೀಪ್ ಅವರ ರಕ್ತ ಮಾದರಿ ಸಂಗ್ರಹಿಸಿ ಪೂನಾ ಲ್ಯಾಬ್‌ಗೆ ರವಾನೆ ಮಾಡಲಾಗಿದ್ದು, ಕೆಮ್ಮು, ತಲೆಸುತ್ತು, ಅತಿಯಾದ ಜ್ವರದಿಂದ ಸಂದೀಪ್ ಬಳಲುತ್ತಿದ್ದಾರೆ.
ಜನವರಿ ೧೮ ರಂದು ಚೀನಾದಿಂದ ಹುಬ್ಬಳ್ಳಿಗೆ ಮರಳಿದ್ದ ಸಂದೀಪ್.
ಹುಬ್ಬಳ್ಳಿಯಲ್ಲೂ ಮುಂಜಾಗ್ರತಾ ಕ್ರಮವಾಗಿ ಕರೋನಾ ರೋಗಿಗಳ ಪ್ರತ್ಯೇಕ ವಾರ್ಡ್ ಸಿದ್ದವಾಗಿದೆ.
ಹತ್ತು ಹಾಸಿಗೆಯ ಪ್ರತ್ಯೇಕ ವಾರ್ಡ್ ಸಿದ್ದವಾಗಿದ್ದು, ವರದಿ ಬಂದ ಬಳಿಕ ಸಂದೀಪ್ ದೇಹದಲ್ಲಿನ ರೋಗದ ಬಗ್ಗೆ ದೃಢವಾಗಲಿದೆ.
ಅಗತ್ಯ ಔಷಧಿಗಳನ್ನು ಸಂಗ್ರಹಿಸಿಕೊಳ್ಳುವಂತೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿಯಿಂದ ಸೂಚನೆ ನೀಡಿದ್ದಾರೆ.