ಪಕ್ಷಾಂತರಿಗಳ ಜೊತೆಗೆ ಸಿ.ಪಿ.ಯೋಗೇಶ್ವರ ಪ್ರತ್ಯಕ್ಷ: ತಿಮ್ಮಪ್ಪನ ಸನ್ನಿಧಿಯಲ್ಲಿ ಜಾರಕಿಹೊಳಿ ಪಟಾಲಂ

ತಿರುಪತಿ: ಬಿಜೆಪಿಯಿಂದ ಗೆದ್ದು ಬಂದು ಮಂತ್ರಿಯಾಗುವ ಕನಸು ಕಾಣುತ್ತಲೇ ಇರುವ ಪಕ್ಷಾಂತರಿಗಳು ಶಾಸಕರೀಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದ್ದಾರೆ. ಕೊನೆಗಳಿಗೆಯಲ್ಲಾದರೂ ಎಲ್ಲವನ್ನೂ ಸರಿ ಮಾಡು ದೇವರೇ ಎಂದು ಬೇಡಿಕೊಳ್ಳುತಿದ್ದಾರೆ. ಏಕೆಂದರೇ, ಸಿಎಂ ಯಡಿಯೂರಪ್ಪ ಹತ್ತೆ ಹತ್ತು ಜನರಿಗೆ ಮಾತ್ರ ಮಂತ್ರಿ ಮಾಡುತ್ತೇನೆ ಎಂದ ಮೇಲೆ ಪಕ್ಷಾಂತರಿಗಳಿಗೆ ಬೇರೆ ದಾರಿ ಕಾಣದಾಗಿದೆ.
ಸಿ.ಪಿ.ಯೋಗೇಶ್ವರಗೆ ಮಂತ್ರಿ ಮಾಡಬಾರದೆಂದು ಹಲವರು ಒತ್ತಾಯ ಮಾಡುತ್ತಿರುವಾಗಲೇ ಪಕ್ಷಾಂತರಿಗಳ ಜೊತೆಗೆ ಯೋಗೇಶ್ವರ ಕಂಡು ಬಂದು ಅಚ್ಚರಿ ಮೂಡಿಸಿದ್ದಾರೆ.
ರಮೇಶ ಜಾರಕಿಹೊಳಿ ತಮ್ಮ ಪಟಾಲಂ ಜೊತೆಗೆ ಇಂದು ತಿಮ್ಮಪ್ಪನ ಆಶೀರ್ವಾದ ಪಡೆದರು. ಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ಅಸಮಾಧಾನಗೊಂಡಿರುವ ಮಹೇಶ ಕುಮಟಳ್ಳಿ ಕೂಡಾ ಜೊತೆಗಿದ್ದಾರೆ. ತಮ್ಮ ಅಹಃಗಾಗಿ ಸರಕಾರವನ್ನೇ ಬೀಳಿಸಿದ ರಮೇಶ ಜಾರಕಿಹೊಳಿಯವರು ಮತ್ತೇನು ತಂತ್ರವನ್ನ ರೂಪಿಸುತ್ತಾರೋ ಕಾದು ನೋಡಬೇಕಿದೆ.