ಅಕ್ಷರ ಜಾತ್ರೆಯ ಅಕ್ಕರೆಯ ಕ್ಷಣಗಳ ರಸದೌತನವನ್ನು ನಿಮಗೆ ಬಡಿಸುವ ತವಕದಲ್ಲಿ ನಾವಿದ್ದೇವೆ. 3 ದಶಕಗಳ ನಂತರ ಮರಳಿ ಸಮ್ಮೇಳನ ಕಲಬರುಗಿಯಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಇನ್ನೊಂದೆಡೆ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದೆ. ಸುದ್ದಿ ಮಾಧ್ಯಮಗಳ ಚಿತ್ತ ರಾಜಕಾರಣಿಗಳ ಸುತ್ತ ಮುತ್ತಲೂ ಗಿರಕಿ ಹೊಡೆಯುವ ಸಾಧ್ಯತೆ ಹೆಚ್ಚಿದ್ದು, ಈ ರಾಜಕಾರಣದ ಭರಾಟೆಯಲ್ಲಿ ಕನ್ನಡದ ಧ್ವನಿ ಕುಗ್ಗಬಾರದು ಎಂಬ ಕಾರಣಕ್ಕೆ ಈ ಮೂರು ದಿನಗಳ ಕಾಲ ನಡೆಯುವ, ನುಡಿ ಜಾತ್ರೆಯ ಸಂಪೂರ್ಣ ಚಿತ್ರಣವನ್ನ ನಿಮಗೆ ತಲುಪಿಸುವ ಆಶಾಭಾವದೊಂದಿಗೆ, ಕರ್ನಾಟಕ ವಾಯ್ಸ್ ತಂಡ ಕಲಬುರಗಿಯ ಕಡೆಗೆ ಪ್ರಯಾಣ ಬೆಳಸಿದೆ. ಇಂತಹ ಸಂಭ್ರಮದ ಕ್ಷಣಗಳಲ್ಲಿ ನಿಮ್ಮ ಸಹಕಾರವನ್ನು ಕರ್ನಾಟಕ ವಾಯ್ಸ್ ಬಯಸುತ್ತದೆ.