ಸಾಹಿತ್ಯ ಸಮ್ಮೇಳನದಲ್ಲಿ ಇಂದು :ಕಾರ್ಯಕ್ರಮಗಳ ವಿವರ
1 min readಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಫೆಬ್ರವರಿ 5 ರಿಂದ 7 ರವರೆಗೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜರುಗಲಿದೆ. ಸಮ್ಮೇಳನದ ಅಂಗವಾಗಿ ಗುರುವಾರ ಫೆಬ್ರವರಿ 6ರಂದು ವಿವಿಧ ವೇದಿಕೆಗಳಲ್ಲಿ ನಡೆಯಲಿರುವ ಗೋಷ್ಠಿಗಳ ವಿವರ ಇಂತಿದೆ.
-
ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಇಂದು ಬೆಳಿಗ್ಗೆ 9.45 ಗಂಟೆಗೆ ಡಾ ಬಿ.ಟಿ ಲಲಿತಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ “ಸ್ತ್ರೀ ಲೋಕ: ತಲ್ಲಣಗಳು” ವಿಷಯ ಕುರಿತು ಮೂರನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ. ಬಿ.ಟಿ. ಲಲಿತಾ ನಾಯಕ್ ಅವರು ಬದಲಾಗುತ್ತಿರುವ ಮಹಿಳಾ ಸಂವೇದನಗಳು, ಡಾ. ಆರ್. ಪೂರ್ಣಿಮಾ ಅವರು ಮಹಿಳೆ ಮತ್ತು ಪ್ರಭುತ್ವ ಕುರಿತು, ತಾರಣಿ ಶುಭದಾಯಿನಿ ಅವರು ಮಹಿಳೆ ಮತ್ತು ಸೃಜನಶೀಲತೆ ಕುರಿತು ಹಾಗೂ ಪ್ರೋ. ಶಿವಗಂಗಾ ರುಮ್ಮಾ ಅವರು ಮಹಿಳೆ ಮತ್ತು ಲೋಕ ಗ್ರಹಿಕೆ ಎಂಬ ವಿಷಯಗಳನ್ನು ಮಂಡಿಸುವರು.
ಅದೇ ರೀತಿ ಅಂದು ಬೆಳಿಗ್ಗೆ 11.30 ಗಂಟೆಗೆ ಪ್ರಸಿದ್ಧ ಸಂಶೋದಕರು ಹಾಗೂ ಸಾಹಿತ್ಯಗಳಾದ ಡಾ. ಷ.ಶಟ್ಟರ್ ಅವರು “ಕನ್ನಡ ಉಳಿಸಿ ಬೆಳೆಸುವ ಬಗೆ” ಕುರಿತು ವಿಶೇಷ ಉಪನ್ಯಾಸ ನೀಡುವರು.
ಅಂದು ಮಧ್ಯಾಹ್ನ 12.15 ಗಂಟೆಗೆ ಡಾ.ಎಚ್.ಟಿ. ಪೋತೆ ಅವರ ಅಧ್ಯಕ್ಷತೆಯಲ್ಲಿ “ದಲಿತ ಬಂಡಾಯ: ಸ್ಥಿತ್ಯಂತರದ ನೆಲೆಗಳು” ವಿಷಯ ಕುರಿತ ನಾಲ್ಕನೇ ಗೋಷ್ಠಿ ನಡೆಯಲಿದೆ. ಡಾ.ಎಚ್.ಟಿ. ಪೋತೆ ಅವರು ಸಾಹಿತ್ಯ ಮತ್ತು ಸಮಾಜ ಕುರಿತು, ಡಾ.ಸುಬ್ರಾವ ಎಂಟೆತ್ತಿನವರ ಅವರು ಶೋಷಣೆ ಮತ್ತು ಬಿಡುಗಡೆ ಕುರಿತು, ಡಾ. ಡಾ.ಕೆ ಕೃಷ್ಣಪ್ಪ ಅವರು ಕಲೆ ಮತ್ತು ಸಂಸ್ಕøತಿ ಕುರಿತು ಹಾಗೂ ಡಾ.ಡಿ.ಜಿ. ಸಾಗರ ಅವರು ಚಳುವಳಿಗಳು ಎಂಬ ವಿಷಯಗಳನ್ನು ಮಂಡಿಸುವರು.
ಅಂದು ಮಧ್ಯಾಹ್ನ 2.30 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಅವರ ಅಧ್ಯಕ್ಷತೆ ಹಾಗೂ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧೀಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಗೌರವ ಉಪಸ್ಥಿತಿಯಲ್ಲಿ ಸನ್ಮಾನ ಸಮಾರಂಭ ಜರುಗಲಿದೆ. ಮಾಜಿ ಕೇಂದ್ರ ಸಚಿವರಾದ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಕೈಗಾರಿಕಾ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸನ್ಮಾನಿತರನ್ನು ಸನ್ಮಾನಿಸಲಿದ್ದಾರೆ.
ಡಾ. ತೇಜಸ್ವಿನಿ ಅನಂತಕುಮಾರ್, ರವಿ ಹೆಗಡೆ, ಅಭಿನಯ, ಪ್ರದೀಪ ಶೆಟ್ಟಿ ಬಹರೇನ್, ಡಾ. ಪದ್ಮ ಎನ್ ಶಾಸ್ತ್ರೀ, ಶ್ರೀನಿವಾಸ ಶರ್ಮಾ ಮೆಲ್ಬರ್ನ್, ಡಾ.ವಿಠ್ಠಲ ದೊಡಮನಿ, ಎಲ್.ಮುತ್ತುರಾಜ್, ಎಂ.ಎಸ್.ನರಸಿಂಹಮೂರ್ತಿ, ಎಸ್.ಜಿ. ಭಾರತಿ, ಮೋಹನ್ ಸೀತನೂರ, ಅಬೂಬಕರ್ ಮಂಟಗೋಳಿ, ಕೆ.ಸಿ. ಜಗನ್ನಾಥ್‍ರೆಡ್ಡಿ, ಎನ್.ಎಸ್ ಹೆಗಡೆ (ಕುಂದರಗಿ), ಸಂಜಯ ಅಡಿಗ, ಪಿ.ವೈ. ರಾಜೇಂದ್ರ ಕುಮಾರ್, ಡಾ.ಚನ್ನಬಸಪ್ಪ ಬಸಲಿಂಗಪ್ಪ ನಾವದಗಿ, ಚಿದಾನಂದ ಸೊಲ್ಲಾಪುರ, ಪಿ.ಶಿವರಾಜು, ಪ್ರೊ.ಕಿರಣ ಆರ್ ದೇಸಾಯಿ, ಡಾ.ಶಿವಕುಮಾರ್ ದೀನೆ, ಡಿ.ಬಿ. ಬಡಿಗೆರ, ಡಾ. ಹೇಮಾವತಿ ಸೊನೊಳ್ಳಿ, ಕೆ.ಎಲ್ ಶ್ರೀನಿವಾಸ್, ಡಾ.ಎಂ ರಾಮ, ಡಾ.ಶಾಮನೂರು ಶಿವಶಂಕರಪ್ಪ, ಷ.ಬ್ರ. ಡಾ ಚನ್ನವೀರ ಶಿವಾಚಾರ್ಯರು, ಎಸ್.ಕೆ. ಕಾಂತಾ, ಮಹೇಂದ್ರ ಮಿಶ್ರಾ, ರವಿ ಬೆಳಗೆರೆ, ಪ್ರೊ.ರಾಘವೇಂದ್ರ ಪಾಟೀಲ, ಬಾಬುರಾವ ಎಸ್ ದೇಶಮಾನೆ, ಎಂ.ಕೆ. ಜೈನಾಪುರ, ಡಾ.ಕೊಡ್ಲಿ ಗುರುರಾಜ, ಎಸ್.ಕೆ ಶೇಷಚಂದ್ರಿಕಾ (ಶೇಷಣ್ಣ), ಶಿವಾನಂದ ತಗಡೂರು, ಶಂಕ್ರಯ್ಯ ಶಿವಬಸಯ್ಯ ಉಕ್ಕಲಿ, ಶಶಿಧರ ಹೆಬ್ಬಾಳ(ಖತಾರ್), ಡಾ.ಕೆ.ಪಿ. ಪುತ್ತೂರಾಯ, ಡಾ.ಟಿ.ಸಿ. ಪೂರ್ಣಿಮಾ, ರಾಜಯೋಗಿನಿ ಬಿ.ಕೆ ವಿಜಯಾ, ಕೆ.ಎಲ್.ನಟರಾಜ, ಬಿ.ಗಂಗಾಧರ, ಎನ್.ಬಿ. ರಾಮಾಪೂರ, ಡಾ.ಎಸ್. ಪದ್ಮನಾಭ ಭಟ್ ಎಕ್ಕಾರ, ಸಂಗಣ್ಣ ಹೋತಪೇಟೆ, ಬಿ.ಎಂ. ರಘು, ಟಿ.ಆರ್. ಮುನಿ ನಾರಾಯಣ, ಗುರುರಾಜ ಕುಲಕರ್ಣಿ, ಪ್ರೊ.ಸಿ. ಉಪೇಂದ್ರ ಸೋಮಯಾಜಿ ಅವರನ್ನು ಸನ್ಮಾನಿಸಲಾಗುವುದು.
ಅಂದು ಸಂಜೆ 4 ಗಂಟೆಗೆ ಅಪ್ಪಾರಾವ ಅಕ್ಕೋಣೆ ಅವರ ಅಧ್ಯಕ್ಷತೆಯಲ್ಲಿ “ವಚನ-ಕೀರ್ತನ ಸಾಹಿತ್ಯ” ವಿಷಯ ಕುರಿತು ಐದನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ.ಕೆ.ರವೀಂದ್ರನಾಥ್ ಅವರು ವಚನ ಸಾಹಿತ್ಯ ಕುರಿತು, ಡಾ. ಅರುಳುಮಲ್ಲಿಗೆ ಪಾರ್ಥಸಾರಥಿ ಅವರು ಕೀರ್ತನ-ದಾಸ ಸಾಹಿತ್ಯದ ಕುರಿತು ಹಾಗೂ ಡಾ.ಶರಣಪ್ಪ ಎಸ್.ಮಾಳಗಿ ಅವರು ದಲಿತ ವಚನಕಾರ ಎಂಬ ವಿಷಯಗಳನ್ನು ಮಂಡಿಸಲಿದ್ದಾರೆ.
ಅಂದು ಸಂಜೆ 5.30 ಗಂಟೆಗೆ ಡಾ. ವಿ.ಪಿ. ನಿರಂಜನಾರಾಧ್ಯ ಅವರ ಅಧ್ಯಕ್ಷತೆಯಲ್ಲಿ “ಕನ್ನಡ ಮಾಧ್ಯಮ ಮತ್ತು ಶಿಕ್ಷಣ” ವಿಷಯ ಕುರಿತು ಆರನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ.ಬಿ.ವಿ. ವಸಂತಕುಮಾರ ಅವರು ಕನ್ನಡ ಪಠ್ಯಗಳ ಪ್ರಸ್ತುತತೆ ಕುರಿತು, ಆನಂದ(ಬನವಾಸಿ ಬಳಗ) ಅವರು ಕನ್ನಡ ಮಾಧ್ಯಮ ಮತ್ತು ಉದ್ಯೋಗ ವಿಷಯದ ಕುರಿತು ಹಾಗೂ ಡಾ. ಹೆಚ್.ಎನ್ ಮುರಳೀಧರ ಅವರು ಪ್ರಾಥಮಿಕ ಶಿಕ್ಷಣ ಮತ್ತು ಮಾಧ್ಯಮ ಎಂಬ ವಿಷಯಗಳನ್ನು ಮಂಡಿಸಲಿದ್ದಾರೆ.
ವಿಶ್ವವಿದ್ಯಾಲಯ ಆವರಣದಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣ (ಸಮಾನಾಂತರ ವೇದಿಕೆ-1) ದಲ್ಲಿ ಅಂದು ಬೆಳಿಗ್ಗೆ 9.45 ಗಂಟೆಗೆ ಪ್ರೊ. ಆರ್.ಕೆ. ಹುಡಗಿ ಅವರ ಅಧ್ಯಕ್ಷತೆಯಲ್ಲಿ “ಕಲಬುರಗಿ ಜಿಲ್ಲಾ ದರ್ಶನ” ವಿಷಯ ಕುರಿತು ಮೂರನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ. ಶುಭುಲಿಂಗ ವಾಣಿ ಅವರು ಐತಿಹಾಸಿಕ ಪರಂಪರೆ ಕುರಿತು, ಡಾ.ಶಶಿಶೇಖರ ರೆಡ್ಡಿ ಅವರು ಪ್ರವಾಸೋದ್ಯಮ ತಾಣಗಳು ಮತ್ತು ಅಭಿವೃದ್ಧಿ ಕುರಿತು, ಡಾ.ಅಮೃತ ಕಟಕೆ ಅವರು ಸಾಹಿತ್ಯ ಮತ್ತು ಸಂಸ್ಕøತಿ ಕುರಿತು ಹಾಗೂ ರಿಯಾಜ್ ಅಹ್ಮದ್ ಬೋಡೆ ಅವರು ಭಾವೈಕ್ಯತೆಯ ನೆಲೆಗಳು ಎಂಬ ವಿಷಯಗಳನ್ನು ಮಂಡಿಸಲಿದ್ದಾರೆ.
ಅಂದು ಬೆಳಿಗ್ಗೆ 11.30 ಗಂಟೆಗೆ ಡಾ. ಮೋಹನ್ ಆಳ್ವೆ ಅವರ ಅಧ್ಯಕ್ಷತೆಯಲ್ಲಿ “ಕನ್ನಡ ನಾಡು-ನುಡಿ ಮತ್ತು ಯುವ ಕರ್ನಾಟಕ” ವಿಷಯದ ಕುರಿತು ನಾಲ್ಕನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಶೋಭಾ ಹೆಚ್.ಜಿ. ಅವರು ಯುವ ಕರ್ನಾಟಕ-ಒಂದು ಅವಲೋಕನ ಕುರಿತು, ಡಾ.ಅಪ್ಪಗೆರೆ ಸೋಮಶೇಖರ ಅವರು ಕರ್ನಾಟಕದ ಯುವ ಸಮುದಾಯದ ಸವಾಲು ಸಾಧ್ಯತೆಗಳು ಹಾಗೂ ಆರಿಫ್ ರಾಜಾ ಅವರು ಯುವ ಲೇಖಕರ ಸಮಕಾಲೀನ ಸ್ಪಂದನೆ ಮತ್ತು ನಾಳೆಯ ಕನಸು ಎಂಬ ವಿಷಯಗಳನ್ನು ಮಂಡಿಸಲಿದ್ದಾರೆ.
ಅಂದು ಮಧ್ಯಾಹ್ನ 1.45 ಗಂಟೆಗೆ ಹನುಮನಗೌಡ ಬೆಳಗುರ್ಕಿ ಅವರ ಅಧ್ಯಕ್ಷತೆಯಲ್ಲಿ “ಕೃಷಿ ಮತ್ತು ನೀರಾವರಿ ವಿಷಯ” ಕುರಿತು ಐದನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಹನುಮನಗೌಡ ಬೆಳಗುರ್ಕಿ ಅವರು ರೈತ ಮತ್ತು ಮಾರುಕಟ್ಟೆ ಕುರಿತು, ರಾಜಶೇಖರ ನಿಂಬರಗಿ ಅವರು ಭೂಮಿ-ಬೀಜ-ಬೆಳೆ ಸದ್ಬಳಕೆ ಕುರಿತು, ಶಿವಾನಂದ ಕಳವೆ ಅವರು ಜಲಸಂವರ್ಧನೆ ಮತ್ತು ನಿರ್ವಹಣೆ ಕುರಿತು ಹಾಗೂ ಸುಮಂಗಲ ಮುಮ್ಮಿಗಟ್ಟಿ ಅವರು ಪ್ರಾಕೃತಿಕ ವಿಕೋಪ ಎಂಬ ವಿಷಯಗಳನ್ನು ಮಂಡಿಸಲಿದ್ದಾರೆ.
ಅಂದು ಮಧ್ಯಾಹ್ನ 3.30 ಗಂಟೆಗೆ ಡಾ. ಲತಾ ಗುತ್ತಿ ಅವರ ಅಧ್ಯಕ್ಷತೆಯಲ್ಲಿ ಆರನೇ ಗೋಷ್ಠಿ (ಕವಿಗೋಷ್ಠಿ-2) ನಡೆಯಲಿದೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿ ಮತ್ತು ಕವಿಯತ್ರಿಯರ ವಿವರ ಇಂತಿದೆ. ಕೆ.ಜಿ.ರಾಜಕುಮಾರ, ಪಿ.ಎಸ್.ವೈಲೇಶ, ರಮೇಶ್ ಕಮತಗಿ, ಶಿವಣ್ಣ ಇಜೇರಿ, ಹಾ.ವೀ.ಮಂಜುಳಾ ಶಿವಾನಂದ, ಡಾ. ಎಂ ಬಸಪ್ಪ ನೆಲಮಾಕನಹಳ್ಳಿ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಸಿದ್ರಾಮ ಬಿರಾದಾರ, ಹೆಚ್.ಸುಬ್ರಹ್ಮಣ್ಯ, ಹರಳೂರು ಶಿವಕುಮಾರ್, ಮೈ.ಸತೀಶಕುಮಾರ, ಡಾ. ಎಜ್.ಎಲ್. ಶಿವಬಸಪ್ಪ, ಮಹದೇವ ನಂಜಯ್ಯ, ದತ್ತಾತ್ರೇಯ ಮ.ಹೊಸಮಠ, ಪದ್ಮಾವತಿ ಚಂದ್ರು, ಎಸ್.ಪಿ. ಸುಳ್ಳದ, ಮಾರುತಿ ಸಿಡ್ಲಾಪೂರ, ಕೆ.ಜಿ ಸರೋಜಾ ನಾಗರಾಜ್, ಪೋಸ್ಟ್ ನಾರಾಯಣಸ್ವಾಮಿ ಕೋಲಾರ, ಶಿವರಾಜ ಶಾಸ್ತ್ರೀ ಹೆರೂರ, ಶಂಕರ ಅಂಕನಶೆಟ್ಟಿಪುರ, ರಾಜಣ್ಣ ಪೂಜಾರ್, ಸಿತಿಮಾ ವಜ್ಜಲ, ಕೆ.ಹೆಚ್ ಹಸನ್‍ಸಾಬ್, ರೋಹಿಣಿ ಯಾದವಾಡ, ನಬಿಲಾಲ್ ಮಕಾನದಾರ, ಕಾಜೂರ ಸತೀಶ, ಡಾ. ಶರಣಪ್ಪ ಗಬ್ಬೂರ್, ಪೂರ್ಣಾಜಿ ಕರಾಟೆ, ಪರಿಮಳ ಕಮತರ, ಕುಮಾರಿ ಅಂಜಲಿ ಬೆಳಗಲ್, ಬಸಯ್ಯಸ್ವಾಮಿ ಕಮಲದಿನ್ನಿ, ಡಾ.ಸಂಗಮೇಶ್ ಎಸ್.ಗಣಿ, ಬಾಪು ಗ.ಖಾಡೆ, ನಾಗಪ್ಪ ಎಸ್.ಬೆಳಮಗಿ, ಸಂಗಮನಾಥ ರೇವತಗಾಂವ, ಅಮೃತೇಶ್ ಹೊಸಳ್ಳಿ, ಭಾರತಿ ಹಾದಿಗೆ, ರೇಣುಕಾ ಡಾಂಗೆ, ಗೌರಿ ಪಾಟೀಲ, ಗ್ಯಾರಂಟಿ ರಾಮಣ್ಣ, ಗಂಗಾಧರ ಸಾಲಕ್ಕಿ, ವಿಜಯಪದ್ಮಶಾಲಿ ಹಾಗೂ ಈ.ರವೀಶ.
ಅಂದು ಸಂಜೆ 5.30 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಅವರ ಅಧ್ಯಕ್ಷತೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವ ಸಂಚಾಲಕ ಎನ್.ಕೆ. ನಾರಾಯಣ ಅವರ ಉಪಸ್ಥಿತಿಯಲ್ಲಿ ಸನ್ಮಾನ ಸಮಾರಂಭ ಜರುಗಲಿದೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಎಂ. ಮಹೇಶ್ವರಯ್ಯ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ (ಪ್ರಭಾರ) ಕುಲಪತಿ ಡಾ. ದೇವಿದಾಸ್ ಜಿ. ಮಾಲೆ ಅವರು ಸನ್ಮಾನಿತರನ್ನು ಸನ್ಮಾನಿಸಲಿದ್ದಾರೆ.
ಸನ್ಮಾನಿತರ ವಿವರ ಇಂತಿದೆ. ವೇಮಗಲ್ ಸೋಮಶೇಖರ್, ಡಾ.ಸಿ.ನಂಜುಂಡಯ್ಯ, ಡಾ.ಸುರೇಶ ಪಾಟೀಲ, ಡಾ.ಕೆ.ರಮಾನಂದ, ಹೆಚ್.ವೆಂಕಟೇಶ, ಡಿ.ಸುಂದರ ಪಾಲ್, ಲಲಿತಾಮೇರಿ, ಎ.ಬಿ. ಹೊಸ್ಮನಿ, ಮುದ್ದೇರಿ ಪಿ.ಮುನಿರೆಡ್ಡಿ, ಓಂಕಾರ ಸಿದ್ರಾಮಪ್ಪ ಬುರುಡ, ಬಿ.ಅನಂತರಾಜು, ಸಿ.ಬಿ.ಮಹೇಶ್ವರಪ್ಪ, ಬಿ.ರಾಜೇಂದ್ರ, ಷಣ್ಮುಖಪ್ಪ ಎಸ್.ಮುಚ್ಚಂಡಿ, ಎ.ಸಿ. ರಾಜಶೇಖರ, ಡಾ. ಬಿ. ನಂಜುಂಡಸ್ವಾಮಿ, ವಿ.ಎಂ. ರಾಜಶೇಖರ, ಪ್ರೊ. ಆರ್.ಎಂ ಚಿಂತಾಮಣಿ, ಮಹ್ಮದ ಕುಂಞ, ಎನ್.ಶಂಕರ, ಶೋಭಾ ರಂಜೋಳಕರ, ರಾಮಕೃಷ್ಣ ಬಡಶೇಷಿ, ನಾರಾಯಣಪ್ಪ ಮಾಡಶಿರವಾರ, ಡಾ. ಎಸ್.ಎಚ್.ಭುವನೇಶ್ವರ, ಪುಂಡಲೀಕ ಕಲ್ಲಿಗನೂರ, ಕ.ಸಾ.ಪ ಸೀತಾ ಲಕ್ಷ್ಮಿ, ಬಿ.ಭದ್ರೇಗೌಡ, ಪರಶಿವಪ್ಪ ಕೆ.ಬಿ, ಭಾರತಿ ಎಂ.ಪ್ರಕಾಶ, ಡಾ. ಆರ್.ಡಿ. ಹೆಗಡೆ ಆಲ್ಮನೆ, ಆರ್.ಟಿ. ವೆಂಕಟೇಶರೆಡ್ಡಿ, ಶೇಖರಗೌಡ ವಿ. ಸರನಾಡಗೌಡರ, ಬಾಲಾಜಿ ಬಿರಾದಾರ, ಮರಿಯಪ್ಪ ಹಾಗೂ ಎನ್. ರಾಜಗೋಪಾಲ ಇವರನ್ನು ಸನ್ಮಾನಿಸಲಾಗುವುದು.
ಅಂದು ಬೆಳಿಗ್ಗೆ 9.45 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಮಹಾತ್ಮ ಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-2) ದಲ್ಲಿ ಬಿ.ಆರ್. ಪೊಲೀಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ “ಜಾನಪದ ಜಗತ್ತು” ವಿಷಯ ಕುರಿತು ಒಂದನೇ ಗೋಷ್ಠಿ ನಡೆಯಲಿದೆ. ಈ ಕವಿಗೋಷ್ಠಿಯಲ್ಲಿ ಬಿ.ಆರ್.ಪೊಲೀಸ್ ಪಾಟೀಲ ಅವರು ಬಯಲಾಟ ಮತ್ತು ಯಕ್ಷಗಾನ ಕುರಿತು, ಡಾ. ಶೈಲಜಾ ಎನ್.ಬಾಗೇವಾಡಿ ಅವರು ಜಾನಪದ ಸಾಹಿತ್ಯ ಕುರಿತು, ಡಾ. ರಾಜಶ್ರೀ ಅವರು ಜಾನಪದ ಮತ್ತು ಸಮಕಾಲೀನತೆ ಕುರಿತು ಹಾಗೂ ಡಾ.ಹನುಮಂತರಾವ್ ಬಿ.ದೊಡ್ಡಮನಿ ಅವರು ಜಾನಪದ ಕಲೆಗಳು ಎಂಬ ವಿಷಯಗಳನ್ನು ಮಂಡಿಸುವರು.
ಅಂದು ಬೆಳಿಗ್ಗೆ 11.30 ಗಂಟೆಗೆ ಡಾ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ “ಮಕ್ಕಳ ಸಾಹಿತ್ಯ ಗೋಷ್ಠಿ” ವಿಷಯದ ಕುರಿತು ಎರಡನೇ ಗೋಷ್ಠಿ ನಡೆಯಲಿದೆ. ಎ.ಕೆ.ರಾಮೇಶ್ವರ ಅವರು ಮಕ್ಕಳ ಸಾಹಿತ್ಯದಲ್ಲಿ ಹೊಸ ಆಯಾಮಗಳು ಕುರಿತು, ರಾಜಶೇಖರ ಕುಕ್ಕುಂದ ಅವರು ಮಕ್ಕಳ ಮೇಲೆ ತಂತ್ರಜ್ಞಾನದ ಪ್ರಭಾವ ಹಾಗೂ ಜಂಬುನಾಥ ಕಂಚ್ಯಾಣಿ ಅವರು ಮಕ್ಕಳ ಸಾಹಿತ್ಯ ಸಮೀಕ್ಷೆ ಎಂಬ ವಿಷಯಗಳನ್ನು ಮಂಡಿಸುವರು.
ಅಂದು ಮಧ್ಯಾಹ್ನ 2 ಗಂಟೆಗೆ ಡಾ. ರಹೆಮತ ತರಿಕೆರೆ ಅವರ ಅಧ್ಯಕ್ಷತೆಯಲ್ಲಿ “ತತ್ವಪದ-ಸೂಫಿ-ಬೌದ್ಧ ಸಾಹಿತ್ಯ” ವಿಷಯ ಕುರಿತು ಮೂರನೇ ಗೋಷ್ಠಿ ನಡೆಯಲಿದೆ. ಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕಡಕೋಳ ಅವರು ತತ್ವಪದ ಸಾಹಿತ್ಯ ಕುರಿತು, ದೇವೇಂದ್ರ ಹೆಗ್ಗಡೆ ಅವರು ಬೌದ್ಧ ಸಾಹಿತ್ಯ ಹಾಗೂ ನೆಲೆಗಳು ಹಾಗೂ ಪರ್ವಿನ ಸುಲ್ತಾನ ಅವರು ಸೂಫಿ ಸಾಹಿತ್ಯ ಎಂಬ ವಿಷಯಗಳನ್ನು ಮಂಡಿಸುವರು.
ಅಂದು ಮಧ್ಯಾಹ್ನ 3.45 ಗಂಟೆಗೆ ಡಾ.ವಿ.ಜಿ. ಅಂದಾನಿ ಅವರ ಅಧ್ಯಕ್ಷತೆಯಲ್ಲಿ “ಕಲಾ ಸಂಗಮ” ಕುರಿತು ನಾಲ್ಕನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ.ವಿ.ಜಿ ಅಂದಾನಿ ಅವರು ಚಿತ್ರ ಮತ್ತು ಶಿಲ್ಪಕಲೆ ಕುರಿತು, ಪ್ರಭಾಕರ್ ಸಾತಖೇಡ ಅವರು ರಂಗಭೂಮಿ ಕುರಿತು, ಡಾ.ಸರ್ವಮಂಗಳ ಶಂಕರ ಅವರು ಸಂಗೀತ ಮತ್ತು ಗಮಕ ಕುರಿತು ಹಾಗೂ ಬೆಂಗಳೂರು ನಾಟ್ಯಾಂಜಲಿಯ ಅಶೋಕ ಕುಮಾರ್.ಎ ಅವರು ನೃತ್ಯಕಲೆ ಎಂಬ ವಿಷಯಗಳನ್ನು ಮಂಡಿಸಲಿದ್ದಾರೆ.