ನನ್ನ ಮಗಳ ಮದುವೆಗೆ ಬನ್ನಿ: ಪ್ರಧಾನಿಯನ್ನ ಕೋರಿದ ಶ್ರೀರಾಮುಲು

ನವದೆಹಲಿ: ಮಾರ್ಚ 5ರಂದು ನಡೆಯುವ ನನ್ನ ಮಗಳ ಮದುವೆಗೆ ತಾವು ಬರಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನ ಸಚಿವ ಶ್ರೀರಾಮುಲು ಆಹ್ವಾನಿಸಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಮಗಳು ರಕ್ಷಿತಾಳ ಮದುವೆಯನ್ನ ಆಡಂಬರದಿಂದ ನಡೆಸುತ್ತಿದ್ದಾರೆ. ಇಂತಹ ಮದುವೆಯಲ್ಲಿ ಪ್ರಧಾನಿಯೂ ಭಾಗಿಯಾಗಲಿ ಎಂಬ ಉದ್ದೇಶದಿಂದ ನರೇಂದ್ರ ಮೋದಿಯವರಿಗೆ ಆಹ್ವಾನ ಪತ್ರ ನೀಡಿದ್ದಾರೆ.