10ವರೆ ಸಾವಿರ ಶಿಕ್ಷಕರ ನೇಮಕ ಶೀಘ್ರದಲ್ಲಿ: ಸಚಿವ ಸುರೇಶಕುಮಾರ

ಮೈಸೂರು: ರಾಜ್ಯದಲ್ಲಿನ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನ ನೀಗಿಸಲು ಶೀಘ್ರದಲ್ಲಿ 10ಸಾವಿರ 500 ಶಿಕ್ಷಕರ ನೇಮಕವನ್ನ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದರು.
ರಾಜ್ಯದ ಹಲವು ಭಾಗಗಳಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ಗಮನಕ್ಕೆ ಬಂದಿದೆ. ಹೀಗಾಗಿಯೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಷ್ಟೇ ಅಲ್ಲ, ಒಂದು ಪಟ್ಟಿಯನ್ನ ಈಗಾಗಲೇ ನೀಡಲಾಗಿದ್ದು, ತಾಂತ್ರಿಕ ದೋಷದಿಂದ ಇನ್ನೊಂದು ಪಟ್ಟಿಯನ್ನ ಪ್ರಕಟ ಮಾಡಿಲ್ಲವೆಂದು ಸಚಿವರು ತಿಳಿಸಿದರು.