ಮಾದಕ ವಸ್ತು ಸಾಗಾಟ: ಫಿನ್ ಲ್ಯಾಂಡ್ ಪ್ರಜೆ ಬಂಧನ

ಗೋಕರ್ಣ: ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ವಿದೇಶಿ ವ್ಯಕ್ತಿಯನ್ನ ಮಾಲು ಸಮೇತ ಬಂಧಿಸುವಲ್ಲಿ ಗೋಕರ್ಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಫಿನ್ ಲ್ಯಾಂಡ್ ನ ಜನ್ನೆ ಪಿಯಾಟಾರಿ ಪ್ಯಾಸೋನೆನ್ ಎಂಬ ವ್ಯಕ್ತಿಯನ್ನ ಬಂಧಿಸಿರುವ ಪೊಲೀಸರು ಆತನಿಂದ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ 510 ಗ್ರಾಂ ಚರಸ್ ವಶಪಡಿಸಿಕೊಳ್ಳಲಾಗಿದೆ. ಆತನ ಬಳಿಯಿದ್ದ 5450 ರೂಪಾಯಿ, ಮೊಬೈಲ್ ಹಾಗೂ ಪಾಸಪೋರ್ಟ ಕೂಡಾ ವಶಕ್ಕೆ ಪಡೆಯಲಾಗಿದೆ.